Advertisement

ಛತ್ತೀಸ್‌ಗಢದಲ್ಲಿ ಹದಿನಾರು ನಕ್ಸಲರ ಸೆರೆ, ಇಬ್ಬರು ಮಹಿಳೆಯರು

03:23 PM Oct 08, 2018 | Team Udayavani |

ರಾಯಪುರ : ಕಳೆದ ವರ್ಷ ಸಿಆರ್‌ಪಿಎಫ್ ತಂಡವೊಂದರ ಮೇಲೆ ನಡೆದ ದಾಳಿಯಲ್ಲಿ ಶಾಮೀಲಾಗಿದ್ದ ಶಂಕಿತ ಐವರು ನಕ್ಸಲರ ಸಹಿತ ಒಟ್ಟು 16 ನಕ್ಸಲರನ್ನು ಪೊಲೀಸರು ಛತ್ತೀಸ್‌ಗಢ ಜಿಲ್ಲೆಯ ಸುಕ್‌ಮಾ ದಲ್ಲಿ ಬಂಧಿಸಿದ್ದಾರೆ.

Advertisement

ಬಂಧಿತ ನಕ್ಸಲರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಜಿಲ್ಲಾ  ಮೀಸಲು ಪಡೆ (ಡಿಆರ್‌ಜಿ) ಮತ್ತು ಜಿಲ್ಲಾ ಪೊಲೀಸ್‌ ದಳದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲರನ್ನು ಚಿಂತಾಗುಫಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಮಿಂಪಾ ಗ್ರಾಮ ಸಮೀಪದ ಬೆಟ್ಟದು ತುದಿಯಲ್ಲಿ ಸೆರೆ ಹಿಡಿಯಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next