Advertisement
ಬೆಂಗಳೂರಿನ ಸೋಂಕಿತ ಸಂಖ್ಯೆ 419ರ ಸಂಪರ್ಕದಿಂದ ಬರೋಬ್ಬರಿ ಒಂಬತ್ತು ಜನರಿಗೆ ಸೋಂಕು ತಾಗಿದೆ. ಇವರೆಲ್ಲರೂ ಬೆಂಗಳೂರು ನಗರದ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
Advertisement
ಸೋಂಕಿತ ಸಂಖ್ಯೆ 171 ಮತ್ತು 371ರ ಸಂಪರ್ಕದಿಂದ ಮಂಡ್ಯದ 47 ವರ್ಷದ ಪುರುಷನಿಗೆ ಸೋಂಕು ದೃಢವಾಗಿದ್ದರೆ, ಸೋಂಕಿತ ಸಂಖ್ಯೆ 179ರ ಸಂಪರ್ಕದಿಂದ ಮಳವಳ್ಳಿಯ 28 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು 443 ಸೋಂಕು ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ 17 ಜನರು ಮೃತರಾಗಿದ್ದಾರೆ. 141 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿದ್ದಾರೆ.