Advertisement

Zero-dose; ಕಳೆದ ವರ್ಷ ಭಾರತದ 16 ಲಕ್ಷ ಮಕ್ಕಳಿಗೆ ಸಿಕ್ಕಿಲ್ಲ ಲಸಿಕೆ: ಯುನಿಸೆಫ್ ವರದಿ

09:06 PM Jul 16, 2024 | Team Udayavani |

ನವದೆಹಲಿ: ಕಳೆದ ವರ್ಷ ಭಾರತದಲ್ಲಿನ 16 ಲಕ್ಷ ಮಕ್ಕಳಿಗೆ ಯಾವುದೇ ಲಸಿಕೆ ನೀಡಲಾಗಿಲ್ಲ. ಇದರಿಂದಾಗಿ ಭಾರತವು “ಜೀರೋ ಡೋಸ್‌ ಚಿಲ್ಡ್ರೆನ್‌’ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ ಎಂದು ಯೂನಿಸೆಫ್ ಮಾಹಿತಿ ನೀಡಿದೆ.

Advertisement

21 ಲಕ್ಷ ಮಕ್ಕಳು ಲಸಿಕೆ ಪಡೆಯದೇ ನೈಜೀರಿಯಾ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ 2021ರಲ್ಲಿ 2.7 ದಶಲಕ್ಷ ಇದ್ದ ಈ ಸಂಖ್ಯೆಯನ್ನು ಹಲವಾರು ಅಭಿಯಾನಗಳ ಮೂಲಕ 2022ರಲ್ಲಿ 1.1 ದಶಲಕ್ಷಕ್ಕೆ ಇಳಿಸಲಾಗಿತ್ತು. ಇದಾದ ಬಳಿಕವೂ ಭಾರತವು ಅಗ್ರ 10ರೊಳಗೆ ಇದೆ.

ವಿಶ್ವದ ಶೇ.59 ರಷ್ಟು “ಜೀರೋ ಡೋಸ್‌ ಚಿಲ್ಡ್ರೆನ್‌’ ಪ್ರಮಾಣವು ನೈಜೀರಿಯಾ, ಇಥಿಯೋಪಿಯಾ, ಕಾಂಗೋ, ಸುಡಾನ್‌, ಇಂಡೋನೇಷಿಯಾ, ಯೆಮೆನ್‌, ಅಫ್ಘಾನಿಸ್ತಾನ, ಅಂಗೋಲಾ ಮತ್ತು ಪಾಕಿಸ್ತಾನಗಳಲ್ಲೇ ಇದೆ ಎಂದು ಯೂನಿಸೆಫ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯೊಳಗೊಂಡು ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next