ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಇದೇ 7ರಿಂದ ಆರಂಭವಾಗಲಿದ್ದು, 16 ಹೊಸ ಮಸೂದೆೆಗಳನ್ನು ಮಂಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.
ಈ ಪೈಕಿ ನಾಲ್ಕು ಮಸೂದೆ ಗಳು ಕರ್ನಾಟಕ, ತಮಿಳುನಾಡು, ಛತ್ತೀಸ್‌ಗಢ, ಹಿಮಾಚಲ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡಗಳ ಪರಿಷ್ಕೃತ ಪಟ್ಟಿಗೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ.
ಡಿ. 29ರಂದು ಅಧಿವೇಶನ ಸಮಾಪ್ತಿ ಯಾ ಗಲಿದ್ದು, ಅದಕ್ಕೂ ಮೊದಲು ಒಟ್ಟಾರೆ 23 ಮಸೂದೆಗಳಿಗೆ ಅಂಗೀ ಕಾರ ಪಡೆಯುವುದು ಸರಕಾರದ ಉದ್ದೇಶವಾಗಿದೆ.
4 ಮಸೂದೆಗಳು ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿ, ರಾಜ್ಯಸಭೆಯಲ್ಲಿ ಪಾಸ್ ಆಗಲು ಬಾಕಿ ಇರುವಂಥದ್ದು. 3 ಮಸೂದೆಗಳು ಸಂಸತ್ ಸ್ಥಾಯೀ ಸಮಿತಿಗೆ ಸಲ್ಲಿಕೆಯಾಗಿ ರುವಂಥದ್ದು.
ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ, ದೇಶದ ಆರ್ಥಿಕತೆಯ ಸ್ಥಿತಿಗತಿ, ಗಡಿಯಲ್ಲಿನ ಪರಿಸ್ಥಿತಿ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಶನಿವಾರ ಕಾಂಗ್ರೆಸ್ ನಾಯಕಿ ಸೋನಿಯಾ ನಿವಾಸದಲ್ಲಿ ನಡೆದ ಪಕ್ಷದ ಸಂಸದೀಯ ಕಾರ್ಯತಂತ್ರ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಪ್ರಯ ತ್ನಗಳ ಕುರಿತೂ ಧ್ವನಿಯೆತ್ತಲು ನಿರ್ಧರಿಸಲಾಗಿದೆ.