Advertisement
ಶ್ರೀಧರ್ ಉಡುಪ: ಅನಾದಿ ಕಾಲದಿಂದಲೂ ಋಷಿ ಮುನಿಗಳು ಹಾಗೂ ಧಾರ್ಮಿಕ ನಾಯಕರು ರಾಜ್ಯದ ಪ್ರಭುಗಳಿಗೆ ಆಡಳಿತಾತ್ಮಕ ವಿಷಯದಲ್ಲಿ ಮಾರ್ಗದರ್ಶನ ನೀಡುತ್ತಲೇ ಇದ್ದಾರೆ. ಆದುದರಿಂದ ಇಂದಿನ ಮಠಾಧೀಶರು ಮಂತ್ರಿಗಳ ನೇಮಕ ವಿಷಯದಲ್ಲಿ ಸಲಹೆ, ಸೂಚನೆಗಳನ್ನು ಸರಕಾರಕ್ಕೆ ತಿಳಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಮಂತ್ರಿಗಳ ನೇಮಕಾತಿಯ ಕುರಿತು ಅವರ ಅಭಿಪ್ರಾಯಗಳನ್ನು ‘ಆದೇಶ’ಗಳಂತೆ ಸರಕಾರಕ್ಕೆ ಸೂಚಿಸುವುದು ತರವಲ್ಲ ಹಾಗೂ ಈ ಕುರಿತಂತೆ ಯಾವುದೇ ರಾಜಕೀಯ ಒತ್ತಡ ತಂತ್ರವನ್ನು ಅನುಸರಿಸುವುದು ಮಠಾಧೀಶರಿಗೆ ಭೂಷಣವಲ್ಲ.
Related Articles
Advertisement
ಶಶಿಕುಮಾರ್ ಸಾಗರ್; ಪ್ರಜಾಪ್ರಭುತ್ವದ ವಿರುದ್ಧ. ರಾಜಕೀಯದಲ್ಲಿ ಮಠಧಿಪತಿಗಳು ಹಸ್ತಕ್ಷೇಪ ಮಾಡುವುದು ಸರಿ ಅಲ್ಲ. ಅದರಲ್ಲೂ ಇತ ತನ್ನ ಸಮಾಜದ ಬಗ್ಗೆ ಮಾತ್ರ ಹೇಳಿರೊದ್ದು ತಪ್ಪು ಸರ್ಕಾರ ಜನರಿಂದ ಆಯ್ಕೆ ಆಗಿರುವುದು. ಜನ ತಿರ್ಮನ ಮಾಡುತ್ತಾರೆ. ಮುಖ್ಯಮಂತ್ರಿ ಒಂದು ಜಾತಿ,ಧರ್ಮಕ್ಕೆ ಸೀಮಿತ ಆಗಿಲ್ಲ. ಅದನ್ನು ಈ ಮುಟ್ಟಳ ಸ್ವಾಮಿಗಳು ಅರ್ಥ ಮಾಡಿಕೊಳ್ಳಬೇಕು.
ನರಸಿಂಹ ಮೂರ್ತಿ ಎನ್ಎಂ :ಅತಂತ್ರ ಸರ್ಕಾರಗಳಿಂದ ರಾಜ್ಯದ ಆಡಳಿತ ಸೂತ್ರ ಕುಸಿದು ಬಿದ್ದು, ರಾಜ್ಯದ ಅಭಿವೃದ್ಧಿ ಸಹ ಕುಂಟಿತವಾಗಿದೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈ ಸರ್ಕಾರ ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಠಾಧೀಶರು, ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. “ಸರ್ವಜನ ಹಿತಾಯ. ಸರ್ವಜನ ಸುಖಾಯ.” ತತ್ವವನ್ನು ಮರೆತು “ಸ್ವಜನ ಹಿತಾಯ, ಸ್ವಜನ ಸುಖಾಯ” ಎನ್ನುವ ಕಾಲ ಬಂದಿದೆ.