Advertisement

15 ಹುಲ್ಲಿನ ಬಣವೆ ಬೆಂಕಿಗಾಹುತಿ

07:27 AM Feb 18, 2019 | Team Udayavani |

ತುರುವೇಕೆರೆ: ತಾಲೂಕಿನ ಸಂಗಲಾಪುರ ಗ್ರಾಮದಲ್ಲಿ ಬೆಂಕಿಗೆ ಆಹುತಿಯಾದ 15 ಹುಲ್ಲಿನ ಬಣವೆಗಳ ಮಾಲಿಕರಿಗೆ ಜಿಲ್ಲಾಧಿಕಾರಿಗಳು ಅಲ್ಪ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಬದಲು ಬಣವೆ ಪ್ರಮಾಣ ಅಂದಾಜಿಸಿ ತಲಾ ಮೂರು ಟ್ರ್ಯಾಕ್ಟರ್‌ ಮೇವು ಪೂರೈಸಬೇಕು ಎಂದು ಶಾಸಕ ಜಯರಾಂ ಒತ್ತಾಯಿಸಿದರು.

Advertisement

ಘಟನೆ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು, ಇದೊಂದು ದುರುದ್ದೇಶಪೂರಿತ ಕೃತ್ಯ. ನಾಗರಿಕ ಸಮಾಜದಲ್ಲಿರುವ ಕೆಲ ಕೆಟ್ಟ ಮನಸ್ಸಿನವರು ಮಾಡಿರುವ ಹೀನಾಯ ಕೃತ್ಯ. ಮೂಕ ಪ್ರಾಣಿಗಳ ಮೇವನ್ನು ಸುಟ್ಟುಹಾಕಿರುವುದು ಖಂಡನೀಯ. ಕೂಡಲೇ ಜಿಲ್ಲಾಡಳಿತ ಮೇವು ಪೂರೈಕೆಗೆ ಮುಂದಾಗಬೇಕು ಎಂದು ಹೇಳಿದರು.

ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸ್‌ ಇಲಾಖೆ ಮುಂದಾಗಿದ್ದು, 25 ಸ್ಪೈ ಕ್ಯಾಮರಾಗಳನ್ನು ಗ್ರಾಮದ ಸುತ್ತಮುತ್ತ ಅಳವಡಿಸಲಾಗಿದೆ. ಈಗಾಗಲೇ ಇಬ್ಬರ ಬಗ್ಗೆ ಗುಮಾನಿಯಿದೆ. ಸೂಕ್ತ ಸಾಕ್ಷಿಗಳು ದೊರಕಿದ ನಂತರ ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಚನ್ನಕೇಶವ ಹಾಗೂ ಭೈರವ ದೇವಸ್ಥಾನಕ್ಕೆ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ತಹಶೀಲ್ದಾರ್‌ ನಯೀಮ್‌ ಉನ್ನೀಸಾ, ಸಿಪಿಐ ಮಹಮದ್‌ ಸಲೀಂ, ಪಿಎಸ್‌ಐ ರಾಜು, ಎಪಿಎಂಸಿ ಸದಸ್ಯ ವಿ.ಟಿ.ವೆಂಕಟರಾಮ್‌, ಮುನಿಯೂರು ಪಿಎಸಿಎಸ್‌ ಅಧ್ಯಕ್ಷ ರಾಜು, ಮುಖಂಡರಾದ ಸೋಮಣ್ಣ, ಹುಚ್ಚೇಗೌಡ, ಚಿದಾನಂದ್‌, ಮಿಥುನ್‌ಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next