Advertisement

ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗದು: ಸಿಂಗ್‌

06:00 AM Apr 29, 2018 | |

ಮುಂಬಯಿ: 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ವಾದವನ್ನು ಆಯೋಗದ ಅಧ್ಯಕ್ಷ ಎನ್‌.ಕೆ.ಸಿಂಗ್‌ ತಿರಸ್ಕರಿಸಿದ್ದಾರೆ. 2011ನೇ ಸಾಲಿನ ಜನಗಣತಿ ಕೇವಲ ಮಾದರಿಯಾಗಿರಲಿದೆ. ಆದರೆ ರಾಜ್ಯಗಳಿಗೆ ನೀಡುವ ನೆರವಿನಲ್ಲಿ ವಿವೇಚಾನಾಧಿಕಾರವೇ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ ಎಂದಿದ್ದಾರೆ. 

Advertisement

ಮುಂಬಯಿಯಲ್ಲಿ ಶನಿವಾರ ಮಾತನಾಡಿದ ಅವರು, ಅರ್ಥವ್ಯವಸ್ಥೆಯಲ್ಲಿ ರಾಜ್ಯಗಳ ಸಾಧನೆಗಳು ಮತ್ತು ದಕ್ಷತೆಯನ್ನು ಆಯೋಗ ಪರಿಗಣಿಸುತ್ತದೆ. ಹಿಂದಿನ ಹಣಕಾಸು ಆಯೋಗ ಕೂಡ 2011ರ ಜನಗಣತಿಯ ವರದಿಯನ್ನು ಪರಿಶೀಲನೆ ನಡೆಸಿತ್ತು. ಆದರೆ ಅತ್ಯಲ್ಪ ಪ್ರಮಾಣದಲ್ಲಿ ಅದನ್ನು ಬಳಕೆ ಮಾಡಲಾಗಿತ್ತು. ಆಯೋಗಕ್ಕೆ ಇರುವ ನಿಯಮಗಳು ಜನಗಣತಿಯ ವರದಿಯನ್ನು ಬಳಕೆ ಮಾಡಬಾರದು ಎಂದು ಹೇಳಿಲ್ಲ ಎಂದಿದ್ದಾರೆ. ವಿತ್ತ ಸಚಿವಾಲಯದ ಶಿಫಾರಸುಗಳ ಆಧಾರದಲ್ಲಿ ರಾಷ್ಟ್ರಪತಿ ಆಯೋಗದ ನಿಯಮಗಳನ್ನು ರಚಿಸುತ್ತಾರೆ. ಅದಕ್ಕೂ 15ನೇ ಹಣಕಾಸು ಆಯೋಗಕ್ಕೂ ಸಂಬಂಧವಿಲ್ಲ ಎಂದಿದ್ದಾರೆ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next