Advertisement
ಎಲ್ಲರೂ ಕ್ಷೇಮವಿದೇಶದಿಂದ ಬಂದು ಕ್ವಾರಂಟೈನ್‌ನಲ್ಲಿದ್ದು, ಪರೀಕ್ಷೆ ವೇಳೆ ಕೋವಿಡ್ ದೃಢಪಟ್ಟ 199ಕ್ಕೂ ಹೆಚ್ಚು ಮಂದಿ ಸದ್ಯ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಕೆಲವರು ಈಗಾಗಲೇ ಬಿಡುಗಡೆಗೊಂಡಿ ದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರೂ ಚೇತರಿಸಿಕೊಳ್ಳು ತ್ತಿರುವುದರಿಂದ ಯಾವುದೇ ಭಯ ಇಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್‌ನಲ್ಲಿ ಸಡಿಲಿಕೆಯಾದ ಬಳಿಕ ಜೂ. 1ರಿಂದಲೇ ಗಲ್ಫ್ ರಾಷ್ಟ್ರಗಳಲ್ಲಿರುವ ಕರಾವಳಿಗರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಿತ್ತು. ಇಲ್ಲಿಯವರೆಗೆ 11 ವಿಮಾನಗಳು ಮಂಗಳೂರಿಗೆ ಬಂದಿಳಿದಿವೆ. 20 ದಿನಗಳಿಂದೀಚೆಗೆ ಗಲ್ಫ್ ರಾಷ್ಟ್ರಗಳಿಂದ ಮತ್ತು ಮುಂಬಯಿಯಿಂದ ಬಂದವರಲ್ಲಿ ಮಾತ್ರ ಕೊರೊನಾ ದೃಢಪಡುತ್ತಿದ್ದು, ಸ್ಥಳೀಯರಿಗೆ ಇದರ ಬಾಧೆ ನಿಂತಿದೆ. ಬಂಟ್ವಾಳ, ಶಕ್ತಿನಗರ, ಬೋಳೂರು ಮುಂತಾದೆಡೆ ಒಂದೇ ಕುಟುಂಬದ ನಾಲ್ಕು ಜನರನ ಕೋವಿಡ್ ಬಾಧಿಸಿದಾಗ ಸ್ಥಳೀಯವಾಗಿ ಮತ್ತಷ್ಟು ಹರಡುವ ಆತಂಕ ನೆಲೆಸಿತ್ತು. ಆದರೆ ಇದೀಗ ಆತಂಕ ದೂರವಾಗಿದೆ.