Advertisement

ರಸ್ತೆ ನಿಯಮ ಉಲ್ಲಂಘಿಸಿ 15,400 ದಂಡ ಕಟ್ಟಿದ

12:22 AM Dec 15, 2019 | Team Udayavani |

ಬೆಂಗಳೂರು: ಒಂದೂವರೆ ವರ್ಷಗಳಿಂದ ಸಂಚಾರ ನಿಯಮ ಉಲ್ಲಂಘಿಸಿ ತಲೆಮರೆಸಿಕೊಂಡು ಓಡಾಡುತ್ತಿದ್ದ ತರಕಾರಿ ವ್ಯಾಪಾರಿ ವಿರುದ್ಧ 70 ಪ್ರಕರಣಗಳನ್ನು ದಾಖಲಿಸಿರುವ ಸಂಚಾರ ಪೊಲೀಸರು 15 ಸಾವಿರ ರೂ. ದಂಡ ವಿಧಿಸಿದ್ದಾರೆ.

Advertisement

ಯಶವಂತಪುರ ನಿವಾಸಿ ಮಂಜುನಾಥ್‌ ದಂಡ ಪಾವತಿಸಿದವರು. ಗುರುವಾರ ಬೆಳಗ್ಗೆ 10 ಗಂಟೆ ಹೊತ್ತಿನಲ್ಲಿ ರಾಜಾಜಿನಗರ ಸಂಚಾರ ಪೊಲೀಸರು ಮಹಾಲಕ್ಷ್ಮೀ ಲೇಔಟ್‌ನ ಶಂಕರನಗರ ಬಸ್‌ ನಿಲ್ದಾಣದ ಬಳಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಮಂಜುನಾಥ್‌ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಆತನನ್ನು ತಡೆದು ವಿಚಾರಿಸಿದಾಗ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಗೊತ್ತಾಗಿದೆ.

ಪೊಲೀಸರ ತಪಾಸಣೆ ವೇಳೆ ಆತನ ಬಳಿ ವಾಹನ ಚಾಲನೆ ಪರವಾನಗಿಯೂ ಇರಲಿಲ್ಲ. ಬಳಿಕ ಪಿಡಿಎ ಯಂತ್ರದಲ್ಲಿ ವಾಹನದ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿದಾಗ ಕಳೆದ ಒಂದೂವರೆ ವರ್ಷದಿಂದ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಸಂಬಂಧ ದಾಖಲಾಗಿದ್ದ 70 ಪ್ರಕರಣಗಳ ಸಂಬಂಧ 15,400 ರೂ. ದಂಡ ವಿಧಿಸಿದ್ದಾರೆ.

ಅದನ್ನು ಪಾವತಿಸುವಂತೆ ಪೊಲೀಸರು ನೋಟಿಸ್‌ ಕೊಟ್ಟು ವಾಹನ ಜಪ್ತಿ ಮಾಡಿದ್ದರು. ಶನಿವಾರ 15,400 ರೂ. ದಂಡ ಕಟ್ಟಿ ವಾಹನ ಬಿಡಿಸಿಕೊಂಡಿದ್ದಾರೆ. ಬಹುತೇಕ ಕೇಸ್‌ಗಳು ಪರಿಷ್ಕೃತ ದಂಡ ಜಾರಿಯಾಗುವುದಕ್ಕಿಂತಲೂ ಹಳೇಯದ್ದಾಗಿವೆ. ಹೀಗಾಗಿ 70 ಕೇಸ್‌ಗಳಲ್ಲಿ 15,400 ರೂ. ದಂಡ ಪಾವತಿಸಬೇಕಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಸಿಸಿ ಕ್ಯಾಮರಾ ದೃಶ್ಯ ಪರಿಗಣಿಸಿ ಕೇಸ್‌ ದಾಖಲು: ತರಕಾರಿ ವ್ಯಾಪಾರಿಯಾಗಿರುವ ಮಂಜುನಾಥ್‌ ಒಂದೂವರೆ ವರ್ಷದಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಮೂವರ ಸವಾರಿ, ಸಿಗ್ನಲ್‌ ಉಲ್ಲಂಘನೆ, ಹೆಲ್ಮೆಟ್‌ ಧರಿಸಿದೆ ಇರುವುದು, ಚಾಲನೆ ವೇಳೆ ಮೊಬೈಲ್‌ ಬಳಕೆ ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳಾಗಿವೆ.

Advertisement

ಪೊಲೀಸರು ಇಲ್ಲದ ಸ್ಥಳಗಳಲ್ಲಿಯೇ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದ್ದರು. ಆದರೆ, ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಫೋಟೋಗಳನ್ನು ಆಧರಿಸಿ ಕಂಟ್ರೋಲ್‌ ರೂಮ್‌ನಲ್ಲಿ ಕೇಸ್‌ ದಾಖಲಿಸಿದ್ದೇವೆ ಎಂದು ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next