Advertisement
ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯೊತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬೆಣ್ಣೆಹಳ್ಳದಲ್ಲಿ ಸಾಕಷ್ಟು ನೀರು ವ್ಯರ್ಥವಾಗಿ ಹೋಗುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಹಳ್ಳದ ಉಪ ಹಳ್ಳವಾಗಿರುವ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಪೊಲ್ಲಾವರಂ ಸ್ಕೀಮಿನಡಿ ನವಲಗುಂದ ತಾಲೂಕಿನ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 1 ಟಿಎಂಸಿ ನೀರು ಹಂಚಿಕೆಯಾಗಿದೆ. ಏತ ನೀರಾವರಿ, ಕೆರೆ ತುಂಬುವ ಯೋಜನೆ ಮತ್ತಿತರ ಕಾಮಗಾರಿಗಳಿಗೆ 400 ಕೋಟಿ ರೂ. ಸಂಯೋಜಿತ ವರದಿ ಅನುಮೋದನೆಯಾಗಿದೆ. ಕರ್ನಾಟಕ ನೀರಾವರಿ ನಿಗಮವು ಡ್ರೋಣ್ ಕ್ಯಾಮರಾ ಹಾಗೂ ಡಿಜಿಟಲ್ ಜಿಪಿಎಸ್ ತಂತ್ರಜ್ಞಾನ ಬಳಸಿ ವಿಸ್ತೃತ ಯೋಜನಾ ವರದಿ ತಯಾರಿಸಲು 50 ಲಕ್ಷ ರೂ. ವೆಚ್ಚದಲ್ಲಿ ಸರ್ವೇ ಕಾರ್ಯ ನಡೆಸುತ್ತಿದೆ ಎಂದರು.
Related Articles
Advertisement
ಸ್ಮಾರ್ಟ್‌ಸಿಟಿಗೆ ಹೆಚ್ಚಿನ ಒತ್ತು: ಹು-ಧಾ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಒಟ್ಟು 58 ಯೋಜನೆಗಳನ್ನು 1 ಸಾವಿರ ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ 15.192 ಕೋಟಿ ರೂ. ಮೊತ್ತದ 10 ಯೋಜನೆಗಳ ಕಾಮಗಾರಿಗಳು ಮುಕ್ತಾಯಗೊಂಡಿವೆ. ಇ-ಶೌಚಾಲಯ, ಈಜುಗೊಳ, ಸ್ಮಾರ್ಟ್ ಸ್ಕೂಲ್, ಸ್ಮಾರ್ಟ್‌ಹೆಲ್ತ್, ಇಂದಿರಾ ಗಾಜಿನಮನೆ ಆವರಣದ ಸಂಗೀತ ಕಾರಂಜಿ ಕಾಮಗಾರಿಗಳು ಪೂರ್ಣಗೊಂಡಿವೆ. 645.17 ಕೋಟಿ ರೂ. ಮೊತ್ತದ 40 ಯೋಜನೆಗಳ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ. ಅದರಲ್ಲಿ ಸ್ಮಾರ್ಟ್‌ರಸ್ತೆಗಳ ನಿರ್ಮಾಣ, ತೋಳನಕೆರೆ ಹಾಗೂ ಉಣಕಲ್ ಕೆರೆ ಅಭಿವೃದ್ಧಿ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸ್ಥಾಪನೆ, ನೆಹರು ಮೈದಾನ ಹಾಗೂ ಚಿಟಗುಪ್ಪಿ ಆಸ್ಪತ್ರೆ ನಿರ್ಮಾಣ, ಮಹಾತ್ಮಾಗಾಂ ಧಿ ಉದ್ಯಾನವನ ಅಭಿವೃದ್ಧಿ ಒಳಗೊಂಡಿವೆ. 10 ಕೋಟಿ ಮೊತ್ತದ ಎರಡು ಯೋಜನೆಗಳ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಉಳಿದ 5 ಯೋಜನೆಗಳನ್ನು 250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸಮಗ್ರ ಕ್ರೀಡಾ ಸಂರ್ಕಿರ್ಣ, ಹಳೇ ಬಸ್ ನಿಲ್ದಾಣ ಅಭಿವೃದ್ಧಿ, ಉಣಕಲ್ ಕೆರೆ ಅಭಿವೃದ್ಧಿ ಮತ್ತು ವಾಣಿವಿಲಾಸ ವೃತ್ತದ ಅಭಿವೃದ್ಧಿ ಯೋಜನೆಗಳು ಸೇರಿವೆ ಎಂದು ಸಚಿವ ಶೆಟ್ಟರ ವಿವರಿಸಿದರು.