ನವದೆಹಲಿ: ಮುಂಬೈ-ನವದೆಹಲಿ ನಡುವಿನ ಎಕ್ಸ್‌ಪ್ರೆಸ್ ಹೆದ್ದಾರಿ 2023ರಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದ್ದು, ನಂತರದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರತಿ ತಿಂಗಳು 1 ಸಾವಿರ ಕೋಟಿ ರೂ.ಗಳಿಂದ 1,500 ಕೋಟಿ ರೂ. ಆದಾಯ ಸಿಗಲಿದೆ.
ಈ ಮೂಲಕ ಎಕ್ಸ್‌ಪ್ರೆಸ್ ಹೆದ್ದಾರಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ “ಚಿನ್ನದ ಗಣಿ’ಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
“ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಎನ್‌ಎಚ್‌ಎಐಗೆ ಟೋಲ್ ಸಂಗ್ರಹದ ಮೂಲಕವೇ 1.40 ಲಕ್ಷ ಕೋಟಿ ರೂ. ಸಂಗ್ರಹವಾಗಲಿದೆ ಎಂದು ಹೇಳಿದ್ದಾರೆ. ಸದ್ಯ 40 ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ.
ಎನ್‌ಎಚ್‌ಎಐ ಸಾಲದ ಕೂಪದಲ್ಲಿ ಇರಲಿಲ್ಲ ಎಂದೂ ಸ್ಪಷ್ಟಪಡಿಸಿರುವ ಸಚಿವ ಗಡ್ಕರಿ ಮುಂದೆಯೂ ಆ ರೀತಿ ಇರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಹಲವು ಅನುಮಾನಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕಡಲ ಕಿನಾರೆಯ ಶವಗಳು
ಇದೇ ವೇಳೆ, ಅಫ್ಘಾನಿಸ್ತಾನದ ಅಭಿವೃದ್ಧಿಗೆ ನಾವು ಸಾಕಷ್ಟು ಹೂಡಿಕೆ ಮಾಡಿದ್ದೇವೆ. ಹಲವು ಯೋಜನೆಗಳು ಸಂಪೂ ರ್ಣ ಗೊಂಡಿದ್ದರೆ ಕೆಲವು ನಿರ್ಮಾಣ ಹಂತದಲ್ಲಿವೆ. ಅಲ್ಲಿಗೆ ಹೂಡಿಕೆ ಮುಂದುವರಿಸಬೇಕೇ, ಬೇಡವೇ ಎನ್ನುವ ನಿರ್ಧಾರವನ್ನು ಪ್ರಧಾನಿ ಮೋದಿ ಕೈಗೊಳ್ಳಲಿದ್ದಾರೆ ಎಂದೂ ಗಡ್ಕರಿ ಹೇಳಿದ್ದಾರೆ.