Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ 1500 ಬ್ಲಾಕ್ ಸ್ಪಾಟ್

12:04 PM Oct 11, 2018 | |

ಬೆಂಗಳೂರು: ನಗರದಲ್ಲಿ ಬ್ಲಾಕ್ ಸ್ಪಾಟ್ ಗಳನ್ನು ಸರ್ವೆ ನಡೆಸಿರುವ ಪಾಲಿಕೆಯ ಅಧಿಕಾರಿಗಳು ಪಾಲಿಕೆಯ ವ್ಯಾಪ್ತಿಯಲ್ಲಿ 1500 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ.

Advertisement

ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರಿಂದ ನಗರದಲ್ಲಿ ತ್ಯಾಜ್ಯ ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದಯ, ಅವುಗಳ ಸಂಖ್ಯೆ ತಡೆಯುವ ಉದ್ದೇಶದಿಂದ ಬಿಬಿಎಂಪಿ ಈಗಾಗಲೆ ಹಲವು ಕ್ರಮ ಕೈಗೊಂಡಿದ್ದರೂ ಸಫಲವಾಗಿರಲಿಲ್ಲ. ಇದೀಗ ನಗರದಲ್ಲಿ ಎಷ್ಟು ಬ್ಲಾಕ್ ಸ್ಪಾಟ್ ಗಳಿವೆ ಎಂಬ ಸರ್ವೆ ನಡೆಸಿರುವ ಅಧಿಕಾರಿಗಳು 1,500 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದ್ದಾರೆ.

ಇದರೊಂದಿಗೆ ಆಟೋ ಟಿಪ್ಪರ್‌ ಮತ್ತು ಕಾಂಪ್ಯಾಕ್ಟರ್‌ಗಳ ಬಳಕೆಯಲ್ಲಿನ ಅಕ್ರಮ ತಡೆಯುವ ಮುಂದಾಗಿರುವ ಅಧಿಕಾರಿಗಳು, ಪ್ರತಿಯೊಂದು ವಾಹನಕ್ಕೂ ಜಿಪಿಎಸ್‌ ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿದ್ದಾರೆ. ಅದರ ಜತೆಗೆ ಕಾಂಪ್ಯಾಕ್ಟರ್‌ಗಳಿಗೆ ಸೆನ್ಸಾರ್‌ ಆಧಾರಿತ ಸ್ಮಾರ್ಟ್‌ ಕಾರ್ಡ್‌ಗಳನ್ನು ನೀಡಲಾಗಿದ್ದು, ವಾಹನ ಯಾವ ಘಟಕಗಳಿಗೆ,
ಎಷ್ಟೊತ್ತಿಗೆ ತೆರಳಲಿದೆ ಎಂಬುದು ತಿಳಿಯಲಿದೆ.

ಪ್ರತಿ ತಿಂಗಳು ಸ್ಮಾರ್ಟ್‌ ಕಾರ್ಡ್‌ ಆಧಾರಿತ ಡಿಜಿಟಲ್‌ ರಿಪೋರ್ಟ್‌ ಸಿದ್ಧಪಡಿಸಲಾಗುತ್ತದೆ. ಅದನ್ನು ಎಲ್ಲ ವಲಯ ಜಂಟಿ ಆಯುಕ್ತರಿಗೆ ಕಳುಹಿಸಿ, ಅದರಂತೆ ಬಿಲ್‌ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ವಿಶೇಷ ಆಯುಕ್ತ ಡಿ.ರಣದೀಪ್‌ ತಿಳಿಸಿದರು

ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ಬ್ಲಾಕ್ ಸ್ಪಾಟ್ ಗಳ ಸಂಖ್ಯೆ
ಹೆಚ್ಚಾಗುತ್ತಿದೆ. ಈ ಕುರಿತು ಪಾಲಿಕೆಯ ಅಧಿಕಾರಿಗಳು ಸರ್ವೆ ನಡೆಸಿದ್ದು, ಪಾಲಿಕೆಯಲ್ಲಿ 1,500 ಇಂತಹ ಸ್ಥಳಗಳನ್ನು ಗುರುತಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡದಂತೆ ಕಠಿಣ ಕ್ರಮಕೈಗೊಳ್ಳಲಾಗುವುದು.
 ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ

Advertisement
Advertisement

Udayavani is now on Telegram. Click here to join our channel and stay updated with the latest news.

Next