Advertisement

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ: ನಳಿನ್‌

11:21 PM Sep 10, 2019 | Lakshmi GovindaRaju |

ಉಡುಪಿ: ಮೂರೂವರೆ ವರ್ಷದ ಬಳಿಕ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನವನ್ನು ಗಳಿಸಿ ಮತ್ತೆ ಸುಸ್ಥಿರವಾಗಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಬಿಜೆಪಿಯಿಂದ ಕಿದಿಯೂರು ಹೋಟೆಲ್‌ ಸಭಾಂಗಣದಲ್ಲಿ ಮಂಗಳವಾರ ಆಯೋಜನೆಗೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಹತ್ತು ದಿನಗಳಲ್ಲಿ ಮೈಸೂರಿನಿಂದ ಬೀದರ್‌ ತನಕ ಪ್ರವಾಸ ನಡೆಸಿದ್ದೇನೆ. ಸಜ್ಜನಿಕೆ ರಾಜಕಾರಣವನ್ನು ಮುಂದಿನ ದಿನಗಳಲ್ಲಿ ನಡೆಸುವ ಮೂಲಕ, ಕಾರ್ಯಕರ್ತರ ಪರಿಶ್ರಮದಿಂದ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇನೆ ಎಂದರು.

ಹೈ.ಕರ್ನಾಟಕ ಮುಕ್ತಿ!: ಜಮ್ಮು ಕಾಶ್ಮೀರ ರಾಜ್ಯದ ದಿಕ್ಕನ್ನು ಕೇಂದ್ರ ಸರಕಾರ ಹೇಗೆ ಬದಲಾಯಿಸಿತೋ ಹಾಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹೈದರಾಬಾದ್‌ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸುವ ಗುಲಾಮಗಿರಿ ಹೆಸರನ್ನು ತೆಗೆದರು. ಇದನ್ನು ಜನರೂ ಸ್ವಾಗತಿಸಿದ್ದಾರೆಂದು ನಳಿನ್‌ ಹೇಳಿದರು.

ಟ್ರಂಪ್‌ಗೂ ಮೋದಿ ಆದರ್ಶ: ಹಿಂದೆಲ್ಲ ಆಡಳಿತ ನಡೆಸಿದವರು ಭಾರತವನ್ನು ವಿದೇಶಗಳ ರೀತಿ ಮಾಡುತ್ತೇವೆ ಎನ್ನುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ಮೋದಿ ರೀತಿ ಆಡಳಿತ ಕೊಡುತ್ತೇನೆಂಬ ಸ್ಥಿತಿಗೆ ಭಾರತ ಬಂದಿದೆ ಎಂದು ನಳಿನ್‌ ಬೆಟ್ಟು ಮಾಡಿದರು.

ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ತ್ರಿವಳಿ ತಲಾಖ್‌ ರದ್ದತಿ ವಿರೋಧಿಸಿ ದ.ಕ. ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್‌ ರಾಜೀನಾಮೆ ನೀಡಿದರು. ವಿಧಿ ರದ್ಧತಿ ಬಳಿಕ ಕಾಶ್ಮೀರದಲ್ಲಿ ಗಲಭೆ ಆಗಿದೆಯೆ? ತಮಿಳುನಾಡಿನಲ್ಲಿ ಚುನಾವಣೆಯಲ್ಲಿ ನಿಲ್ಲಬೇಕಾದರೆ ದೇಶದ ಪ್ರಶ್ನೆ ಎತ್ತಬೇಡಿ. ಪ್ರಧಾನಿಯವರ ನಿರ್ಧಾರವನ್ನು ದೇಶದ ಜನರು ಒಪ್ಪಿ ಕೊಂಡಿದ್ದಾರೆ. ಮುಂದೆ ಇಂಥವರು ರಾಜೀನಾಮೆಯಲ್ಲ ಆತ್ಮಹತ್ಯೆಯೇ ಮಾಡಿಕೊಳ್ಳುವಂಥ ನಿರ್ಧಾರಗಳನ್ನು ಮೋದಿ ಸರಕಾರ ಕೈಗೆತ್ತಿಕೊಳ್ಳಲಿದೆ.
-ಸುನಿಲ್‌ ಕುಮಾರ್‌, ಕಾರ್ಕಳ ಶಾಸಕ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next