Advertisement

ಕಾಬೂಲ್ ವಿಮಾನ ನಿಲ್ದಾಣದಿಂದ 150 ಮಂದಿ ಭಾರತೀಯರನ್ನು ಅಪಹರಿಸಿದ ತಾಲಿಬಾನ್!

05:06 PM Aug 21, 2021 | Team Udayavani |

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 150 ಮಂದಿ ಭಾರತೀಯರನ್ನು ಅಪಹರಿಸಿದ್ದ ಘಟನೆ ಶನಿವಾರ (ಆಗಸ್ಟ್ 21) ನಡೆದಿದ್ದು, ಅಪಹರಣದ ಬಳಿಕ ಭಾರತೀಯರ ಪಾಸ್ ಪೋರ್ಟ್ ಪರಿಶೀಲಿಸಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ವಾಪಸ್ ಕರೆದೊಯ್ಯುತ್ತಿರುವುದಾಗಿ ಅಫ್ಘಾನ್ ಮಾಧ್ಯಮಗಳ ವರದಿ ತಿಳಿಸಿದೆ.

Advertisement

ಸುಮಾರು 150 ಮಂದಿ ಭಾರತೀಯರನ್ನು ಅಪಹರಿಸಿದ್ದ ತಾಲಿಬಾನ್ ಅವರನ್ನೆಲ್ಲಾ ಪ್ರಶ್ನಿಸಿರುವುದಾಗಿ ವರದಿ ಹೇಳಿದೆ. ಇವರೆಲ್ಲರೂ ಯುದ್ಧಗ್ರಸ್ಥ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಾಪಸ್ ತೆರಳಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಇದೀಗ 150 ಮಂದಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ವಾಪಸ್ ಬರುತ್ತಿದ್ದು, ಕೂಡಲೇ ಅವರನ್ನು ಅಫ್ಘಾನಿಸ್ತಾನದಿಂದ ಏರ್ ಲಿಫ್ಟ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತೀಯರು ಸೇರಿದಂತೆ ಸುಮಾರು 150 ಮಂದಿಯನ್ನು ತಾಲಿಬಾನ್ ಅಪಹರಿಸಿರುವುದಾಗಿ ಈ ಮೊದಲು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ತಾಲಿಬಾನ್ ಆರೋಪವನ್ನು ಅಲ್ಲಗಳೆದಿತ್ತು.

ಶನಿವಾರ ಬೆಳಗ್ಗೆ ಭಾರತೀಯ ವಾಯುಪಡೆ 85 ಭಾರತೀಯರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಏರ್ ಲಿಫ್ಟ್ ಮಾಡಿತ್ತು. ಅವರೆಲ್ಲಾ ಇಂದು ಸಂಜೆ ದೆಹಲಿ ಸಮೀಪದ ಹಿನ್ ಡೋನ್ ವಾಯುನೆಲೆಗೆ ಆಗಮಿಸುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next