ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2008 ರಿಂದೀಚೆಗೆ ಕಸ್ಟಂಸ್ ಇಲಾಖೆ ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯ-ಡಿಆರ್‌ಐ ರಕ್ತ ಚಂದನ ವಶಪಡಿಸಿಕೊಂಡಿದ್ದು, ಬಂದರಿನ ಯಾರ್ಡ್‌ನಲ್ಲಿ ಪೇರಿಸಿಡಲಾಗಿದೆ.
Advertisement
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇವುಗಳನ್ನು ಗ್ಲೋಬಲ್ ಟೆಂಡರ್ ಮೂಲಕ ವಿಲೇವಾರಿ ಮಾಡಬಹುದು. ಪೂರ್ವಭಾವಿ ಅನುಮೋದನೆ, ಪತ್ರವ್ಯವಹಾರಗಳನ್ನು ಕಸ್ಟಂಸ್ ನಡೆಸಿದ್ದು, ಮಾರುವ ಅಧಿಕಾರ ಹೊಂದಿರುವ ಅರಣ್ಯ ಇಲಾಖೆಯೇ ಮಾರಾಟ ಪ್ರಕ್ರಿಯೆ ನಡೆಸಲಿದೆ. ಇದರಿಂದ ಬರುವ ಆದಾಯ ಕಸ್ಟಂಸ್ ಇಲಾಖೆಗೆ ಸೇರಲಿದೆ. ಈ ಕುರಿತು ಶೀಘ್ರವೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಬಂದರಿನಲ್ಲಿ 58 ಟನ್ ರಕ್ತಚಂದನ ಇರುವ ಮಾಹಿತಿ ಲಭ್ಯವಾಗಿದೆ. ದಿಮ್ಮಿಗಳನ್ನು ಗುಣಮಟ್ಟಕ್ಕನುಸಾರ ಎ, ಬಿ ಮತ್ತು ಸಿ ಎಂದು ವಿಂಗಡಿಸಿ ಚಿತ್ರೀಕರಿಸಲಾಗುವುದು. ಬಳಿಕ ಅದರ ಮಾರಾಟ ಪ್ರಕ್ರಿಯೆ ನಡೆಯಲಿದೆ. ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಬೇರೆ ವಸ್ತುಗಳ ರಫ್ತು ಹೆಸರಿನಲ್ಲಿ ಕಂಟೈನರ್‌ಗಳಲ್ಲಿ ರಹಸ್ಯವಾಗಿ ಅಡಗಿಸಿ ಸಾಗಿಸುವ ಅನೇಕ ಪ್ರಕರಣಗಳು ಮಂಗಳೂರಿನಲ್ಲೂ ವರದಿಯಾಗಿವೆ. ಕಸ್ಟಂಸ್ ಹಾಗೂ ಡಿಆರ್‌ಐ ಇಲಾಖೆಗಳು ಇಂತಹ ಪ್ರಕರಣಗಳನ್ನು ತನಿಖೆ ಮಾಡುತ್ತವೆ. ಒಂದೆಡೆ ವಿಲೇವಾರಿ ಪ್ರಕ್ರಿಯೆ ನಡೆದರೆ ಇನ್ನೊಂದೆಡೆ ಆರೋಪಿಗಳ ನ್ಯಾಯಾಂಗ ವಿಚಾರಣೆ ನಡೆಯುತ್ತಿರುತ್ತದೆ.
Related Articles
ರಕ್ತಚಂದನದ ಸಾಗಾಟ, ರಫ್ತು ನಿಷೇಧಿತ. ಅಕ್ರಮ ಸಾಗಣೆ ಸಂದರ್ಭ ವಶಪಡಿಸಿಕೊಂಡಾಗಲೂ ವಿಲೇವಾರಿ ಸುಲಭವಲ್ಲ. ಅದಕ್ಕೆಂದೇ ಪ್ರತ್ಯೇಕ ಮಾರ್ಗಸೂಚಿ ಇದೆ. ಗ್ಲೋಬಲ್ ಟೆಂಡರ್ ಮೂಲಕ ಹೊರದೇಶದವರು ಪಡೆದಾಗಲೂ ವರ್ಷಕ್ಕೆ ಇಂತಿಷ್ಟೇ ಕಳುಹಿಸಬೇಕೆಂಬ ನಿರ್ಬಂಧವಿದೆ. ಅರಣ್ಯ ಇಲಾಖೆ, ಕಸ್ಟಂಸ್, ಕೇಂದ್ರ ಸಚಿವಾಲಯ ಈ ಪ್ರಕ್ರಿಯೆಯಲ್ಲಿ ಒಳಗೊಳ್ಳಲಿದ್ದು, ಕೇಂದ್ರ ಸರಕಾರದ ಅನುಮೋದನೆಗೆ ದೀರ್ಘಕಾಲ ತಗಲಿದೆ.
Advertisement
ಕೆಂಪು ಪಟ್ಟಿಯಲ್ಲಿರುವ ಮರಅಂತಾರಾಷ್ಟ್ರೀಯವಾಗಿಯೂ ಇದರ ಆಮದು ರಫ್ತು ಮೇಲೆ ನಿರ್ಬಂಧಗಳಿವೆ. ಕನ್‌ವೆನ್ಶನ್ ಆನ್ ಇಂಟರ್‌ನ್ಯಾಶನಲ್ ಟ್ರೇಡ್ ಇನ್ ಎಂಡೇಂಜರ್x ವೈಲ್ಡ್ ಫೋನಾ ಆ್ಯಂಡ್ ಫ್ಲೋರಾ( ಸೈಟ್ಸ್) ಆಧಾರದಲ್ಲಿ ಕಸ್ಟಂಸ್ ಕಾಯ್ದೆ 1962ರಡಿ ಇದರ ಆಮದು ಮತ್ತು ರಫ್ತು ನಿಷೇ«ವಿದೆ. ಇಂಟರ್‌ನ್ಯಾಶನಲ್ ಯೂನಿಯನ್ ಫಾರ್ ಕನ್‌ಸರ್ವೇಶನ್ ಆಫ್ ನೇಚರ್(ಐಯುಸಿಎನ್) ಇದರ ಕೆಂಪುಪಟ್ಟಿಯಲ್ಲಿ ರಕ್ತಚಂದನ ಸೇರಿದ್ದು, ಅದು ಅತ್ಯಂತ ಹೆಚ್ಚು ಅಳಿವಿನಂಚಿನಲ್ಲಿರುವ ಪ್ರಭೇದದ ಮರ ಎನ್ನುವುದರ ಸೂಚಕ. ಬಹಳ ವರ್ಷಗಳಿಂದ ಬಾಕಿ ಇರುವ ರಕ್ತಚಂದನವನ್ನು ಇ-ಆಕ್ಷನ್ ಮಾಡಲು ಮುಂದಾಗಿದ್ದೇವೆ. ಪ್ರಕ್ರಿಯೆಯನ್ನು ನಾವು ನಿರ್ವಹಿಸುತ್ತೇವೆ, ಗ್ರೇಡಿಂಗ್, ಲಾಟಿಂಗ್ ಮಾಡಲಾಗುತ್ತಿದೆ.
– ಡಾ| ಕರಿಕಾಳನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವೇಣುವಿನೋದ್ ಕೆ.ಎಸ್.