ಲಂಡನ್: ಇಲ್ಲಿ ನಡೆ ಯುತ್ತಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ 15ರ ಹರೆಯದ ಶಾಲಾ ಬಾಲಕಿ ಕೋರಿ ಗಾಫ್ ಇತಿಹಾಸ ನಿರ್ಮಿಸಿದ್ದಾರೆ. ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್‌ಗೆ ನೇರ ಸೆಟ್‌ಗಳಿಂದ ಆಘಾತವಿಕ್ಕಿದ ಕೋರಿ ಗಾಫ್ ದ್ವಿತೀಯ ಸುತ್ತಿಗೇರಿದರು.
ವಿಂಬಲ್ಡನ್ ಟೂರ್ನಿಗೆ ಅರ್ಹತೆ ಪಡೆದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗಾಫ್ ಸ್ಟಾರ್ ಆಟಗಾರ್ತಿ ವೀನಸ್ ವಿರುದ್ಧ 6-4, 6-4 ಸೆಟ್‌ಗಳಿಂದ ಗೆದ್ದರಲ್ಲದೆ ನೆರೆದಿದ್ದ ಅಪಾರ ಟೆನಿಸ್ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.
ಪಂದ್ಯದ ಆರಂಭದಿಂದಲೂ 15ರ ಪ್ರಾಯದ ಗಾಫ್ ಆತ್ಮವಿಶ್ವಾಸದಿಂದಲೇ ಉತ್ತಮ ಪ್ರದರ್ಶನ ತೋರಿದರು. ದಿಟ್ಟತನದಿಂದಲೇ ವಿಶ್ವ ಶ್ರೇಷ್ಠ ಆಟಗಾರ್ತಿಗೆ ಪ್ರಬಲ ಪೈಪೋಟಿ ನೀಡಿ ಮೊದಲ ಸೆಟ್‌ನಲ್ಲೇ 6-4 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದರು. ಮೊದಲ ಸೆಟ್‌ನ ಜಯದ ಆತ್ಮ ವಿಶ್ವಾಸದಲ್ಲಿ ಎರಡನೇ ಸೆಟ್ ಆಡಿದ ಗಾಫ್ 4 ಮ್ಯಾಚ್ ಪಾಯಿಂಟ್ ಪಡೆದರು.
ನಾನು ಈ ಗೆಲುವನ್ನು ನನ್ನ ಗುರುಗಳಿಗೆ ಅರ್ಪಿಸುತ್ತೇನೆ ಈ ಗೆಲುವಿನಿಂದ ತುಂಬಾ ಬಾವುಕಳಾ ಗಿದ್ದೇನೆ ಎಂದ ಅವರು ಗೆಲುವಿನಿಂದ ಸಂಭ್ರಮ ಪಡು ವುದಿಲ್ಲ. ಯಾಕೆಂದರೆ ನಾನೀಗಷ್ಟೇ ಟೆನಿಸ್ ಲೋಕಕ್ಕೆ ಕಾಲಿ ಡುತ್ತಿದ್ದೇನೆ ನಾನು ಇಲ್ಲಿ ಕಲಿಯುವುದು ತುಂಬಾ ಇದೆ
– ಕೋರಿ ಗಾಫ್.