Advertisement

15 ಸಾವಿರ ಕೋವಿಡ್ ಪರೀಕ್ಷೆ: 1037 ಜನರಿಗೆ ಸೋಂಕು ದೃಢ

06:42 PM Sep 16, 2020 | Suhan S |

ಬಸವನಬಾಗೇವಾಡಿ: ತಾಲೂಕಿನಲ್ಲಿ 15 ಸಾವಿರ ಜನರನ್ನು ಕೋವಿಡ್‌-19 ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ 1037 ಜನರಿಗೆ ಸೋಂಕು ದೃಢವಾಗಿದ್ದು ಸೋಂಕಿನಿಂದ ಇದುವರೆಗೆ 17 ಜನ ಸಾವನ್ನಪ್ಪಿದ್ದಾರೆ ಎಂದು ಸರಕಾರಿ ಆಸ್ಪತ್ರೆ ವೈದ್ಯಾ ಕಾರಿ ಡಾ| ಶಶಿಧರ ಓತಗೇರಿ ಹೇಳಿದರು.

Advertisement

ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗ ಶೇ. 95 ಗುಣಮುಖರಾಗಿದ್ದು ಈಗ ಒಟ್ಟು ತಾಲೂಕಿನಲ್ಲಿ 224 ಜನರು ಸೋಂಕಿತರಿದ್ದಾರೆ ಎಂದು ಹೇಳಿದರು.

ಕುದರಿಸಾಲವಾಡಗಿ ಸದಸ್ಯ ಜಾಕೀರ್‌ ಹುಸೇನ್‌ ಶಿವಣಗಿ ಮಾತನಾಡಿ, ಹೂವಿನಹಿಪ್ಪರಗಿ, ಯಾಳವಾರ, ಬೂದಿಹಾಳ ರಸ್ತೆ ಸಂಪೂರ್ಣ ಹಾಳಾಗಿದ್ದು ಜನರು ಸಂಚರಿಸಲು ಆಗುತ್ತಿಲ್ಲ ಎಂದು ಹೇಳಿದರು. ಮನಗೂಳಿ-ಬಿಜ್ಜಳ, ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ನಿರ್ಮಿಸಲಾದ ಕಾಲುವೆಗಳ ಮೇಲೆ ಸಮರ್ಪಕ ರಸ್ತೆ ಮಾಡದೆ ಇರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.

ಆಗ ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಸಿ. ವಂದಾಲ ಮಾತನಾಡಿ, ಕೆಬಿಜೆಎನ್‌ ಎಲ್‌ ಇಲಾಖೆಯವರಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ನಮ್ಮ ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳ ಮಧ್ಯ ಭಾಗದಲ್ಲಿ ಹಾದು ಹೋದ ಕಾಲುವೆಗಳ ಮೇಲೆ ಡಾಂಬರೀಕರಣ ಮಾಡಬೇಕು ಎಂದು ಸೂಚಿಸಿದ್ದೇವೆ ಎಂದು ಹೇಳಿದರು.

ಈ ವರ್ಷ ತಾಪಂ ಸದಸ್ಯರಿಗೆ 1.50 ಕೋಟಿ ರೂ. ಅನುದಾನ ಬರಬೇಕಾಗಿತ್ತು. ಆದರೆ ಕೇವಲ 50 ಲಕ್ಷ ರೂ. ಮಾತ್ರ ಬಂದಿದೆ ಎಂದು ಯೋಜನಾ ಅಧಿಕಾರಿ ಆರ್‌.ಪಿ. ಪಾಟೀಲ ಸಭೆಗೆ ವಿವರಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ದೇವೇಂದ್ರ ನಾಯಕ, ಉಪಾಧ್ಯಕ್ಷೆ ಸುಜಾತಾ ಪಾಟೀಲ, ಸದಸ್ಯರಾದ ಲಲಿತಾಬಾಯಿ ಪವಾರ, ರತ್ನಾಬಾಯಿ ದೊಡ್ಡಮನಿ, ಶಾಂತಮ್ಮ ಪಾಟೀಲ, ಮಂಜುಳಾ ಲಮಾಣಿ, ನೀಲಮ್ಮ ಮೂಲಿಮನಿ ಭಾಗವಹಿಸಿದ್ದರು. ಸಭೆಯಲ್ಲಿ ಕೇಲವು ವಿವಿಧ ಅಧಿ ಕಾರಿಗಳು ಮಾತ್ರ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next