Advertisement

ಗಂಗಾವತಿಯಲ್ಲಿ ಒಂದೇ ದಿನದಲ್ಲಿ 15 ಪಾಸಿಟಿವ್

05:16 PM Jul 06, 2020 | Suhan S |

ಗಂಗಾವತಿ: ಕೋವಿಡ್ ಹರಡದಂತೆ ಜಿಲ್ಲಾಡಳಿತ ಹಲವಾರು ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಕೋವಿಡ್ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚುತ್ತಿದೆ. ರವಿವಾರ ಒಂದೇ ದಿನ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ 15 ಜನರಿಗೆ ಸೋಂಕು ದೃಢಪಟ್ಟಿದೆ. ಅನ್ಯ ಊರುಗಳಿಂದ ಬಂದವರಿಂದಲೇ ಕೋವಿಡ್ ಹೆಚ್ಚು ಹರಡುತ್ತಿದೆ.

Advertisement

ಗಂಗಾವತಿ ನಗರದ ಕಿಲ್ಲಾ ಏರಿಯಾದಲ್ಲಿ 2 ವರ್ಷದ ಬಾಲಕಿಗೆ, ನೀಲಕಂಠೇಶ್ವರ ಕ್ಯಾಂಪಿನಲ್ಲಿ 6 ತಿಂಗಳ ಹಸುಗೂಸಿನ 25 ವರ್ಷದ ತಾಯಿ, ಮುರಾಹರಿ ನಗರದಲ್ಲಿ 23 ವರ್ಷದ ಮಹಿಳೆ, ವಾಲ್ಮೀಕಿ ವೃತ್ತದ ಹತ್ತಿರ 39 ವರ್ಷದ ವ್ಯಕ್ತಿ, ಅಗ್ನಿಶಾಮಕದಳ 28 ವರ್ಷದ ವಾಹನ ಚಾಲಕ, ಅಂಗಡಿ ಸಂಗಣ್ಣ ಕ್ಯಾಂಪಿನಲ್ಲಿ 34 ವರ್ಷ ವ್ಯಕ್ತಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಇವರೆಲ್ಲ ಅನ್ಯ ಊರಿಗೆ ತೆರಳಿದ್ದು ನೆಗಡಿ ಜ್ವರದ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಆಗಮಿಸಿದ್ದ ವೇಳೆ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಪಾಸಿಟಿವ್‌ ಬಂದಿದ್ದು, ಸೋಂಕಿತರನ್ನು ನಗರದ ಕೊವೀಡ್‌-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಐದು ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಿ ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಣೆ ಮಾಡಲಾಗಿದೆ.

ಗ್ರಾಮೀಣ ಭಾಗದಲ್ಲೂ ಕೋವಿಡ್: ತಾಲೂಕಿನ ಆಗೋಲಿಯ 26 ವರ್ಷದ ಯುವಕ, ಶ್ರೀರಾಮನಗರದ 29 ವರ್ಷದ ವ್ಯಕ್ತಿ, ಆಚಾರನರಸಾಪೂರದಲ್ಲಿ 30 ವರ್ಷದ ವ್ಯಕ್ತಿ, ಹೊಸಳ್ಳಿ ಗ್ರಾಮದ 19 ವರ್ಷದ ಯುವಕ, ಶ್ರೀರಾಮನಗರದ 5ನೇ ವಾರ್ಡಿನ 17 ವರ್ಷದ ಬಾಲಕಿನೆ ಕೋವಿಡ್ ಪಾಸಿಟಿವ್‌ ಬಂದಿದೆ.

ತಹಸೀಲ್ದಾರ್‌ ಎಲ್‌.ಡಿ. ಚಂದ್ರಕಾಂತ, ಆರೋಗ್ಯ ಅಧಿಕಾರಿ ಡಾ| ಶರಣಪ್ಪ ಚಿಕೋಟಿ, ನಗರಸಭೆ ಪೌರಾಯುಕ್ತ ಶೇಖರಪ್ಪ ಇಳಿಗೇರ್‌, ಕಂದಾಯ ನಿರೀಕ್ಷಕರಾದ ಮಹೇಶ ದಲಾಲ್‌, ಮಂಜುನಾಥ ಹಿರೇಮಠ ಹಾಗೂ ಆಶಾಕಾರ್ಯಕರ್ತೆಯರು ಕೋವಿಡ್ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಮಾಹಿತಿ ಪಡೆದರು. ಸೋಂಕು ತಗುಲಿದ ವ್ಯಕ್ತಿಗಳ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next