ಕರಾಚಿ: ಬುಡಕಟ್ಟು ಜನಾಂಗದ ಗುಂಪು ಘರ್ಷಣೆಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ದರ್ರಾ ಆದಮ್ ಖೇಕ್ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.
ಸನ್ನಿಖೇಲ್ ಮತ್ತು ಝರ್ಘುನ್ ಖೇಲ್ ಬುಡಕಟ್ಟು ಜನಾಂಗದವರ ನಡುವೆ ಕಲ್ಲಿದ್ದಲು ಗಣಿ ಗಡಿ ವಿಂಗಡಣೆ ಕುರಿತು ಕಳೆದ ಹಲವರು ವರ್ಷಗಳಿಂದ ವಿವಾದಗಳಿದ್ದು, ಈ ಬಿಕ್ಕಟ್ಟು ಹೆಚ್ಚಾಗಿ ಘರ್ಷಣೆ ಉಂಟಾಗಿದೆ.
ಪೇಶಾವರದ ನೈಋತ್ಯಕ್ಕೆ ಸುಮಾರು 35 ಕಿಮೀ ದೂರದಲ್ಲಿರುವ ದರ್ರಾ ಆದಮ್ ಖೇಕ್ ಪ್ರದೇಶದ ಕೊಹತ್ ಜಿಲ್ಲೆಯಲ್ಲಿ ಘರ್ಷಣೆ ನಡೆದಿದ್ದು ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮದುವೆಯಲ್ಲಿ ತನ್ನ ಪತ್ನಿ ಜತೆ ಡ್ಯಾನ್ಸ್ ಮಾಡುತ್ತಿದ್ದ ಸಹೋದರರನ್ನೇ ಹತ್ಯೆಗೈದ ವ್ಯಕ್ತಿ
Related Articles
ಮೃತದೇಹಗಳು ಮತ್ತು ಗಾಯಗೊಂಡವರನ್ನು ಪೇಶಾವರ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರ ನಿಖರ ಸಂಖ್ಯೆ ತಕ್ಷಣವೇ ತಿಳಿದಿಲ್ಲ, ಆದರೆ ಗುಂಡಿನ ಚಕಮಕಿಯಲ್ಲಿ ಎರಡೂ ಕಡೆಯಿಂದ ಸಾವುನೋವುಗಳು ಸಂಭವಿಸಿವೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಮತ್ತು ಇತರ ಭದ್ರತಾ ಪಡೆಗಳ ಜಂಟಿ ತಂಡಗಳು ಸ್ಥಳಕ್ಕೆ ಧಾವಿಸಿ ಎರಡು ಬುಡಕಟ್ಟುಗಳ ನಡುವಿನ ಗುಂಡಿನ ದಾಳಿಯನ್ನು ನಿಯಂತ್ರಿಸಿದೆ.
ಕಲ್ಲಿದ್ದಲು ಗಣಿ ಗಡಿ ವಿಂಗಡಣೆ ಈ ಬಿಕ್ಕಟ್ಟನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಹಲವು ಬಾರಿ ಸಂಧಾನ ಸಭೆಗಳನ್ನು ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ವರದಿ ತಿಳಿಸಿದೆ.