Advertisement

ವರ್ಷಂಪ್ರತಿ ದೇಶದಲ್ಲಿ 5 ಲಕ್ಷ ರಸ್ತೆ ಅಪಘಾತ; 1.50 ಲಕ್ಷ ಜನರ ಸಾವು

04:05 PM Jul 27, 2017 | udayavani editorial |

ಹೊಸದಿಲ್ಲಿ : ದೇಶದಲ್ಲಿ ಪ್ರತೀ ವರ್ಷ ಕನಿಷ್ಠ  ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ ಮತ್ತು 1.50 ಲಕ್ಷ ಜನರು ವರ್ಷಂಪ್ರತಿ ಈ ಅಪಘಾತಗಳಲ್ಲಿ ಸಾಯುತ್ತಾರೆ ಎಂಬ ಆಘಾತಕಾರಿ ವಿಷಯವನ್ನು ಇಂದು ಲೋಕಸಭೆಗೆ ತಿಳಿಸಲಾಯಿತು. 

Advertisement

ದೇಶದಲ್ಲಿ ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆ ಶೇ.4ರಷ್ಟು ಏರಿದೆ; ಅದೇ ವೇಳೆ ದೇಶದಲ್ಲಿನ ಮೋಟಾರು ವಾಹನ ಉದ್ದಿಮೆಯು ಶೇ.22ರ ಬೆಳವಣಿಗೆಯನ್ನು ದಾಖಲಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೈವೇ ಸಚಿವರಾಗಿರುವ ನಿತಿನ್‌ ಗಡ್ಕರಿ ಲೋಕಸಭೆಯಲ್ಲಿ ಪ್ರಶ್ನಾ ವೇಳೆಯಲ್ಲಿ ಹೇಳಿದರು. 

ದೇಶದಲ್ಲಿ ಸುಮಾರು ಶೇ.30ರಷ್ಟು ಬೋಗಸ್‌ ಲೈಸನ್ಸ್‌ಗಳು ಚಾಲ್ತಿಯಲ್ಲಿವೆ ಎಂದು ಸಚಿವ ಗಡ್ಕರಿ ತಿಳಿಸಿದರು. 

ತನ್ನ ಸಚಿವಾಲದ ದೇಶದಲ್ಲೇ ಮೊದಲ ಬಾರಿಗೆ ಸೇತುವೆಗಳ ಸಮೀಕ್ಷೆ ನಡೆಸಿದೆ. ದೇಶದಲ್ಲಿ 1.62 ಲಕ್ಷ ಸೇತುವೆಗಳಿವೆ; ಇವುಗಳಲ್ಲಿ 1,26,233 ಮೋರಿಗಳು ಸೇರಿವೆ; 147 ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ಗಡ್ಕರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next