Advertisement
ಈ ಕೃತ್ಯವನ್ನು ಯಾರು ಎಸಗಿದ್ದು ಎಂದು ಇನ್ನೂ ಖಚಿತವಾಗಿಲ್ಲ. ಇತ್ತೀಚೆಗೆ ಸತತವಾಗಿ ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ಎಸಗುತ್ತಿರುವ ಯೆಮೆನ್ ದೇಶದ ಹೌಥಿ ಬಂಡುಕೋರರ ಮೇಲೆ ಅನುಮಾನ ಮೂಡಿದೆ.
ಲಿಲಾ ನಾರ್‌ಫೋಕ್ ಹಡಗಿನ ಸಿಬಂದಿ ಸೋಮಾಲಿಯ ಬಳಿ 5ರಿಂದ 6 ಶಸ್ತ್ರಸಜ್ಜಿತ ವ್ಯಕ್ತಿಗಳು ತಮ್ಮ ಹಡಗನ್ನೇರಿದ್ದಾರೆ ಎಂದು ಬ್ರಿಟನ್ನಿನ ಯುಕೆಎಂಟಿಒ ಸಂಸ್ಥೆಗೆ ಮಾಹಿತಿ ನೀಡಿತ್ತು. ಆ ಕೂಡಲೇ ಭಾರತೀಯ ನೌಕಾಪಡೆಯು ಐಎನ್‌ಎಸ್ ಚೆನ್ನೈ ಯುದ್ಧ ಹಡಗನ್ನು ಕಳುಹಿಸಿತ್ತು. ಶುಕ್ರವಾರ ಲಿಲಾ ನಾರ್‌ಫೋಕ್ ಬಳಿ ಧಾವಿಸಿದ ಭಾರತೀಯ ನೌಕಾಪಡೆಯ ಕಮಾಂಡೋಗಳು ಹಡಗನ್ನು ಪೂರ್ಣ ನಿಯಂತ್ರಣಕ್ಕೆ ಪಡೆದಿದ್ದಾರೆ. ಬಿಗಿ ರಕ್ಷಣೆ
ಐಎನ್‌ಎಸ್ ಚೆನ್ನೈ ಜತೆಗೆ ಪಿ-8ಎಲ್ ಸಂಚಾರಿ ಯುದ್ಧವಿಮಾನವೂ ಲಿಲಾ ನಾರ್‌ಫೋಕ್‌ಗೆ ರಕ್ಷಣೆ ನೀಡುತ್ತಿದೆ. ದೂರವ್ಯಾಪ್ತಿಯ ಎಂಕ್ಯು9ಬಿ ಬೇಟೆ ಡ್ರೋನ್ ಪರಿಸ್ಥಿತಿಯ ಮೇಲೆ ಕಣ್ಣಿರಿಸಿದೆ.