ಔರಾದ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೋಮವಾರ ಔರಾದ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕೆಕೆಆರ್ ಡಿಬಿ ನಿಧಿ ಹಾಗೂ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ನಿಧಿ ಸೇರಿದಂತೆ ವಿವಿಧ ಯೋಜನೆಗಳಡಿ ಸುಮಾರು 15 ಕೋಟಿ ವೆಚ್ಚದ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಜಮಾಲಪುರದಲ್ಲಿ 12 ಲಕ್ಷ ರೂ. ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ, 4 ಕೋಟಿ ರೂ. ವೆಚ್ಚದಲ್ಲಿ ಕೋರೆಕಲ್ ದಿಂದ ಗೌಡಗಾಂವ್ ರಸ್ತೆ ಕಾಮಗಾರಿಗೆ, 15 ಲಕ್ಷ ರೂ. ವೆಚ್ಚದಲ್ಲಿ ಕೋರೆಕಲ್‌ನಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ, 2 ಕೋಟಿ ರೂ. ವೆಚ್ಚದಲ್ಲಿ ಹೆಡಗಾಪುರದಿಂದ ಹೆಡಗಾಪುರ ಕ್ರಾಸ್ ವರೆಗಿನ ರಸ್ತೆ ಕಾಮಗಾರಿಗೆ, 4 ಕೋಟಿ 95 ಲಕ್ಷ ರೂ.ವೆಚ್ಚದಲ್ಲಿ ಹೆಡಗಾಪುರ ಕ್ರಾಸ್‌ದಿಂದ-ಸಂತಪುರವರೆಗಿನ ರಸ್ತೆ ಕಾಮಗಾರಿಗೆ, 7 ಲಕ್ಷ ರೂ. ವೆಚ್ಚದಲ್ಲಿ ನಾಗೂರ (ಬಿ)ನಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗೆ, 19 ಲಕ್ಷ ರೂ. ವೆಚ್ಚದಲ್ಲಿ ಸಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಂತಪುರವರೆಗಿನ ಸಿಸಿ ರಸ್ತೆ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.
ಇನ್ನು 2 ಕೋಟಿ ರೂ. ವೆಚ್ಚದಲ್ಲಿ ಸಂತಪುರ-ಜೋಜನಾ ರಸ್ತೆಯ ಬ್ರಿಜ್ ನಿರ್ಮಾಣ ಕಾಮಗಾರಿಗೆ, 15 ಲಕ್ಷ ರೂ. ವೆಚ್ಚದಲ್ಲಿ ಮುಸ್ತಾಪುರ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ, 15 ಲಕ್ಷ ರೂ. ವೆಚ್ಚದಲ್ಲಿ ಮಣಿಗೆಂಪುರ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ, 20 ಲಕ್ಷ ರೂ. ವೆಚ್ಚದಲ್ಲಿ ಕೌಠಾ (ಕೆ) ಗ್ರಾಮದಲ್ಲಿ ತೆರೆದಬಾವಿ ಕಾಮಗಾರಿಗೆ, 30 ಲಕ್ಷ ರೂ. ವೆಚ್ಚದಲ್ಲಿ ವಡಗಾಂವದಲ್ಲಿ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿಗೆ, 25 ಲಕ್ಷ ರೂ. ವೆಚ್ಚದಲ್ಲಿ ಜೊನ್ನಿಕೇರಿ ಗ್ರಾಮದಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿಗೆ, 47.30 ಲಕ್ಷ ರೂ ಅನುದಾನದಲ್ಲಿ ಲಸ್ಕರ್ ನಾಯಕ ತಾಂಡಾ ರಸ್ತೆ ಕಾಮಗಾರಿಗೆ, 80 ಲಕ್ಷ ರೂ ವೆಚ್ಚದಲ್ಲಿ ಔರಾದ್ ಪಾಲಿಟೆಕ್ನಿಕ್ ಕಾಲೇಜ್ ರಸ್ತೆ ಕಾಮಗಾರಿಗೆ, 15 ಲಕ್ಷ ರೂ ವೆಚ್ಚದಲ್ಲಿ ಔರಾದ್‌ನ ಜನತಾ ಕಾಲೋನಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ, 1 ಕೋಟಿ ರೂ ವೆಚ್ಚದಲ್ಲಿ ತೇಗಂಪುರದಿಂದ ಚೋಜನಾ ಕ್ರಾಸ್ ವರೆಗಿನ ರಸ್ತೆ ಕಾಮಗಾರಿಗೆ, 2 ಕೋಟಿ ರೂ.ವೆಚ್ಚದಲ್ಲಿ ಎನಗುಂದಾ ಕ್ರಾಸ್ ದಿಂದ ಸುಂಡಾಲ ರಸ್ತೆವರೆಗಿನ ರಸ್ತೆ ಕಾಮಗಾರಿಗೆ, 27 ಲಕ್ಷ ರೂ ವೆಚ್ಚದಲ್ಲಿ ಚಿಂತಾಕಿ ಮತ್ತು ಕರಂಜಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸಚಿವ ಚವ್ಹಾಣ ಚಾಲನೆ ನೀಡಿದರು.
ಜಿಪಂ ಸದಸ್ಯ ಮಾರುತಿ ಚವ್ಹಾಣ, ಮುಖಂಡರಾದ ಸುರೇಶ ಬೋಸಲೆ, ಬಂಡೆಪ್ಪ ಕಂಟೆ, ವಸಂತ ಬಿರಾದಾರ, ರಮೇಶ ದೇವಕಟ್ಟೆ, ಸಚಿನ್ ರಾಠೊಡ, ಸುಜೀತ್ ರಾಡೋಡ, ರಾಮರಾವ್ ರಾಠೊಡ ಇತರರು ಇದ್ದರು.