ಚಾಮರಾಜನಗರ: ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಸೋಮವಾರ ದಿಂದ 15 ಬಸ್ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅವಕಾಶ, ಕೆಲವು ನಿರ್ಬಂಧಗಳನ್ನು ವಿಧಿಸಿ ಬಟ್ಟೆ ಅಂಗಡಿ ಮತ್ತು ಕ್ಷೌರಿಕ ಅಂಗಡಿ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 144 ಸೆಕ್ಷನ್ ಅನ್ನು ಮೇ 10 ರವರೆಗೂ ಮುಂದುವರಿ ಸಲಾಗುವುದು. ಬಟ್ಟೆ ಅಂಗಡಿ, ಕ್ಷೌರಿಕ ಅಂಗಡಿ ಮತ್ತು ಬ್ಯೂಟಿ ಪಾರ್ಲರ್ ತೆರೆಯಬಹುದು. ಸಲೂನ್‌ಗಳಿಗೆ ಹೋಗುವ ಗ್ರಾಹಕರು ಅವರದೇ ಟವೆಲ್ ತರಬೇಕು. ಅಂಗಡಿಯಲ್ಲಿ ಇಬ್ಬರು ಮೂವರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ. ಕತ್ತಿ ಮತ್ತು ಕತ್ತರಿ ಬಿಸಿ ನೀರಿನಲ್ಲಿ ಸ್ಟರಿಲೈಸ್ ಮಾಡಿ ಡೆಟಾಲ್ ಹಾಕಿ ತೊಳೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಾಯೋಗಿಕವಾಗಿ 15 ಕೆಎಸ್‌ಆರ್ ಟಿಸಿ ಬಸ್ ಸಂಚರಿಸಲು ಬೆ.7ರಿಂದ ಸಂಜೆ 7ರವರೆಗೆ ಅವಕಾಶ. ಬಸ್‌ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ. ಚಾಮರಾಜನಗರದಿಂದ ಗುಂಡ್ಲುಪೇಟೆ, ಕೊಳ್ಳೇಗಾಲಕ್ಕೆ, ಕೊಳ್ಳೇಗಾಲ ಬಸ್‌ಗಳು ಕೌದಳ್ಳಿಗೆ ಮಾತ್ರ ಸೀಮಿತ. ಮಹದೇಶ್ವರ ಬೆಟ್ಟ ಮತ್ತು ಬಿಳಿಗಿರಿರಂಗನಬೆಟ್ಟಕ್ಕೆ ಹೋಗಲು ಅವಕಾಶ ಇಲ್ಲ. ಗುಂಡ್ಲುಪೇಟೆ ಯಿಂದ ಬೇಗೂರಿಗೆ ಇಲ್ಲ. ಸಂತೆಮರಹಳ್ಳಿಯಿಂದ ಉಮ್ಮತ್ತೂರು ಕಡೆಗೆ ಬಸ್ ಇಲ್ಲ. ಚಾ.ನಗರದಿಂದ ಸಂತೆಮರಹಳ್ಳಿ, ಯಳಂ ದೂರು ಮಾತ್ರ ನಿಲುಗಡೆ. ಪ್ರತಿ ಟ್ರಿಪ್ ಸ್ಯಾನಿಟೈಸ್ ಮಾಡಬೇಕು. ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಖಾಸಗಿ ಬಸ್, ಅಂತರ ಜಿಲ್ಲೆಗಳಿಗೆ, ಅಂತಾ ರಾಜ್ಯಗಳಿಗಿಲ್ಲ. ಗ್ರಾಮೀಣ ಪ್ರದೇಶಕ್ಕೆ ಬಸ್ ಇಲ್ಲ. 15 ಬಸ್‌ಗೆ ಮಾತ್ರ ಅವಕಾಶ. ಬಸ್ಸಿನಲ್ಲಿ ಲಾಕ್‌ಡೌನ್ ನಿಯಮ ಪಾಲಿಸಬೇಕು ಎಂದು ತಿಳಿಸಿದರು. ಸೋಮವಾರದಿಂದ ವೈನ್ಸ್ ಸ್ಟೋರ್ ತೆರೆಯಲು ಅವಕಾಶ ನೀಡಲಾಗಿದೆ. ಒಬ್ಬರಿಗೆ 750 ಮಿಲಿಗಿಂತ ಹೆಚ್ಚು ಮದ್ಯ ನೀಡುವಂತಿಲ ಎಂದು ತಿಳಿಸಿದರು. ಎಸ್ಪಿಆನಂದಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.