Advertisement
ಕೃಷಿ ಕುಟುಂಬಕಿನ್ನಿಗೋಳಿ ವಿಜಯಾ ಕಲಾವಿದರ ನಾಟಕ ತಂಡದ ಪ್ರಬುದ್ಧ ಹಾಸ್ಯ ಕಲಾವಿದನಾಗಿ, ತಂಡದ ನಿರ್ವಾಹಕ ರಾಗಿ ಗುರುತಿಸಿಕೊಂಡಿರುವ ಸುಧಾಕರ ಸಾಲ್ಯಾನ್ ಸಂಕಲಕರಿಯ ಅವರದ್ದು ಮೂಲತಃ ಕೃಷಿ ಕುಟುಂಬ. ಜೀವ ವಿಮಾ ನಿಗಮದ ಪ್ರತಿನಿಧಿಯೂ ಆಗಿದ್ದಾರೆ. ಕಳೆದ ವರ್ಷದಿಂದ ಇವರು ಕೃಷಿಯಲ್ಲಿ ತೊಡಗಿಕೊಂಡಿದ್ದು, ಭತ್ತ ಬೆಳೆಯುತ್ತಿದ್ದಾರೆ.
ಸುಧಾಕರ್ ಅವರು ಹಡಿಲು ಬಿದ್ದ ಕೃಷಿ ಭೂಮಿಗಳನ್ನು ಸಿದ್ಧಗೊಳಿಸಿ, ಸುಡು ಮಣ್ಣು ತಯಾರಿಸಿ ಮಳೆ ಬಂದಾಗ ಗದ್ದೆ ಹದಗೊಳಿಸಿ ನಾಟಿ ಕಾರ್ಯ ನಡೆಸಿದ್ದಾರೆ. ಇದಕ್ಕಾಗಿ ಶಾಂತಿಪಲ್ಕೆಯ ಮಹಿಳಾ ಕಾರ್ಮಿಕರ ನೆರವು ಪಡೆದಿ ದ್ದಾರೆ. ಕಳೆದ ವರ್ಷವೂ ಸೀಸನ್‌ಗೆ ಅನುಗುಣವಾಗಿ ಕೃಷಿ ನಡೆಸಿ ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ. ಇವರ ಕಾರ್ಯಕ್ಕೆ ಹೆತ್ತವರಾದ ವಾಸು ಸಾಲ್ಯಾನ್-ಜಾನಕಿ ದಂಪತಿ, ಮನೆಯವರು ಕೈ ಜೋಡಿಸಿದ್ದಾರೆ. ಬಹುಮುಖ ಪ್ರತಿಭೆ
ಕಲಾವಿದರಾದ ಸುಧಾಕರ ಬಹುಮುಖ ಪ್ರತಿಭೆ. ಐಕಳ ಗ್ರಾ.ಪಂ. ಸದಸ್ಯರಾಗಿರುವ ಅವರು ಈ ಹಿಂದೆ ಸಂಕಲಕರಿಯದಲ್ಲಿ ಶಾಂಭವಿ ನದಿ ಬತ್ತಿ ಹೋಗುತ್ತಿರುವ ಕಾಲಕ್ಕೆ ಅಣೆಕಟ್ಟು ಕಟ್ಟಿ ಯಶಸ್ಸು ಕಂಡಿದ್ದರೆ. ಇದಕ್ಕಾಗಿ ಆಧುನಿಕ ಭಗೀರಥ ಎಂಬ ಗೌರವವನ್ನೂ ಪಡೆದಿದ್ದರು.
Related Articles
ನಾವು ಕೃಷಿ ಪರಂಪರೆಯಿಂದಲೇ ಬಂದವರು. ಮುಂದಿನ ಪೀಳಿಗೆಗೆ ಕೃಷಿಯ ಮಹತ್ವ ತಿಳಿಸಬೇಕಾಗಿದೆ. ಕೃಷಿಯಿಂದಲೇ ಬದುಕು ಸಾಗಿಸುವ ಕೃಷಿಕರಿಗೆ ಸರಕಾರ ವೃದ್ಧಾಪ್ಯ ಕಾಲದಲ್ಲಿ ವಿಶೇಷ ಪಿಂಚಣಿ ನೀಡುವ ಬಗ್ಗೆ ಯೋಚಿಸಬೇಕಾಗಿದೆ.
– ಸುಧಾಕರ ಸಾಲ್ಯಾನ್ , ಸಾಧಕ ಕೃಷಿಕ
Advertisement