ಪುಣೆ: ಅಮೆರಿಕದ ಖ್ಯಾತ ಕಾರು ನಿರ್ಮಾಣ ಕಂಪನಿ ಜನರಲ್ ಮೋಟಾರ್ಸ್‌ನ ಭಾರತೀಯ ಘಟಕ ಹಾಗೂ ಅದರ ಭಾರತೀಯ ಉದ್ಯೋಗಿಗಳ ನಡುವಿನ ಗಲಾಟೆ ತಾರಕ್ಕೇರಿದೆ.
ಮಹಾರಾಷ್ಟ್ರದ ಪುಣೆಯ ತಾಳೇಗಾಂವ್‌ನಲ್ಲಿನ ಜನರಲ್ ಮೋಟಾರ್ಸ್ ಘಟಕದ ಎಲ್ಲ 1419 ಉದ್ಯೋಗಿಗಳನ್ನು ಕಿತ್ತೂಗೆಯಲಾಗಿದೆ.
“ನಿಯಮಗಳ ಪ್ರಕಾರ ಕಿತ್ತೂಗೆಯಲ್ಪಟ್ಟವರಿಗೆ ಸೂಕ್ತ ಪರಿಹಾರವನ್ನೂ ನೀಡಲಾಗುವುದು. ಕೊರೊನಾದಂತಹ ಪ್ರಾಕೃತಿಕ ವಿಕೋಪಗಳ ವೇಳೆ ಉದ್ಯೋಗಿಗಳನ್ನು ಕಿತ್ತೂಗೆಯಲು ಅಧಿಕೃತ ಸಂಸ್ಥೆಗಳಿಂದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಜನರಲ್ ಮೋಟಾರ್ಸ್ ತಿಳಿಸಿದೆ.
ಈ ನಡೆಯನ್ನು ಅಲ್ಲಿನ ಉದ್ಯೋಗಿಗಳ ಸಂಘ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ.
ಇದನ್ನೂ ಓದಿ :ನಟ ವಿವೇಕ್‌ಗೆ ಭಾವಪೂರ್ಣ ವಿದಾಯ : ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ