Advertisement

ತಮಿಳುನಾಡಿನಲ್ಲಿ ಬಾಕ್ಸಿಂಗ್‌ ಪಂದ್ಯದ ವೇಳೆ ಅಸುನೀಗಿದ 14ರ ಬಾಲಕಿ

04:59 PM Jan 07, 2017 | Team Udayavani |

ಚೆನ್ನೈ : ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ  ಬಾಕ್ಸಿಂಗ್‌ ಪಂದ್ಯದಲ್ಲಿ ಸ್ಪರ್ಧಿಸಿದ್ದ 14 ವರ್ಷ ಪ್ರಾಯದ ಬಾಲಕಿ ಮೃತಪಟ್ಟ ದಾರುಣ ಘಟನೆ ನಿನ್ನೆ ಶುಕ್ರವಾರ ಸಂಭವಿಸಿದೆ. 

Advertisement

46 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೆ ಮಾರೀಶ್ವರಿ, 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಜಿಲ್ಲಾ ಮಟ್ಟದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಕೆ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡಳು. ಒಡನೆಯೇ ಆಕೆಯನ್ನು ಆಸ್ಪತ್ರೆಗೆ ಒಯ್ಯಲಾಯಿತು. ಅನಂತರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಆಕೆಯನ್ನು ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಅಲ್ಲಿ ಆಕೆ ಕೊನೆಯುಸಿರೆಳೆದಳು. 

ಮಾರೀಶ್ವರಿಯ ಬಾಕ್ಸಿಂಗ್‌ ಪಂದ್ಯವನ್ನು ನೋಡಲು ಆಕೆಯ ತಾಯಿ ಕೂಡ ಬಂದಿದ್ದರು. ಆದರೆ ಮಗಳ ಸಾವನ್ನು ನೋಡಬೇಕಾದ ದೌರ್ಭಾಗ್ಯ ಆಕೆಯ ಪಾಲಿಗೆ ಒದಗಿತು. 

“ಆಕಸ್ಮಿಕ ಸಾವಿನ ಈ ಘಟನೆಯನ್ನು ನಾವು ದಾಖಲಿಸಿಕೊಂಡಿದ್ದೇವೆ; ತನಿಖೆ ನಡೆಸುತ್ತಿದ್ದೇವೆ. ಪಂದ್ಯದ ವೇಳೆ ಮಾರೀಶ್ವರೀ ತಲೆಸುತ್ತಿ ಬಂದವಳಂತೆ ಕಂಡು ಬರುತ್ತಿದ್ದಳು; ಆಕೆಯ ತಾಯಿ ಆಕೆಯ ಜತೆಗಿದ್ದರು’ ಎಂದು ತೂತುಕುಡಿ ಜಿಲ್ಲಾ ಎಸ್‌ಪಿ ಅಶ್ವಿ‌ನ್‌ ಕೊಟ್‌ನೀಸ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next