Advertisement
ಬೆಂಗಳೂರಿನ ಪಿಳ್ಳಣ್ಣ ಗಾರ್ಡ್‌ನ್ ನಿವಾಸಿ ನಾಸೀರ್ ಪಾಷಾ, ಎಚ್‌ಬಿಆರ್ ಲೇಔಟ್‌ನ ಮನ್ಸೂರ್ ಅಹ್ಮದ್, ಕಲಬುರಗಿಯ ಶೇಖ್ ಇಜಾಜ್ ಅಲಿ, ಮೈಸೂರಿನ ಮೊಹಮ್ಮದ್ ಖಲಿಮುಲ್ಲಾ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಬ್ದುಲ್ ಖಾದರ್, ಬಂಟ್ವಾಳ ತಾಲೂಕಿನ ಮೊಹಮ್ಮದ್ ತಾಫೀರ್, ಮಂಗಳೂರಿನ ಮೊಹಿನುದ್ದೀನ್, ನವಾಜ್ ಕವೂರ್, ಅಶ್ರಫ್ ಜೋಕಟೆ, ಅಯುಬ್ ಕೆ. ಅಜೆಂಡಿ, ಶಿವಮೊಗ್ಗದ ಶಾಹೀದ್ ಖಾನ್, ದಾವಣಗೆರೆಯ ಇಮಾದುದ್ದೀನ್, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಬ್ದುಲ್ ಅಜೀಜ್ ಅಬ್ದುಲ್, ಕೊಪ್ಪಳ ಜಿಲ್ಲೆಯ ಮೊಹಮ್ಮದ್ ಫಯಾಜ್ ಎಂಬವರನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗಳು ಪಿಎಫ್ಐ ಸಂಘಟನೆ ಹೆಸರಿನಲ್ಲಿ ದೇಶದ್ರೋಹದ ಕೃತ್ಯಗಳನ್ನು ಎಸಗುತ್ತಿದ್ದರು. ಮುಸ್ಲಿಂ ಯುವಕರನ್ನು ಮೂಲಭೂತವಾದಿಗಳನ್ನಾಗಿಸಿ ದೊಡ್ಡ ಮಟ್ಟದ ವಿದ್ವಂಸಕ ಕೃತ್ಯಗಳನ್ನು ನಡೆಸಲು ಧಾರ್ಮಿಕ ಸ್ಥಳ, ನಿರ್ದಿಷ್ಟ ಸಮುದಾಯದ ವ್ಯಕ್ತಿಗಳ ಬಗ್ಗೆ ದ್ವೇಷ ಭಾವನೆ ಹುಟ್ಟು ಹಾಕುತ್ತಿದ್ದರು.
Related Articles
ಅಲ್ಲದೆ, ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವ ಕಾರ್ಯಕ್ರಮ ಮತ್ತು ತಪ್ಪು ಮಾಹಿತಿಯನ್ನು ಒಳಗೊಂಡ ಭಾಷಣದ ತುಣುಕುಗಳು ಮತ್ತು ಪೋಸ್ಟರ್‌ಗಳನ್ನು ಆಫ್ಲೈನ್ ಮತ್ತು ಆನ್‌ಲೈನ್ ಮೂಲಕ ಹೊಸದಾಗಿ ಸಂಘಟನೆಗೆ ಸೇರಿಕೊಂಡಿರುವ ಯುವಕರಿಗೆ ತೋರಿಸಿ ಪ್ರಚೋದಿಸುತ್ತಿದ್ದರು. ಜತೆಗೆ ತರಬೇತಿ ಕ್ಯಾಂಪ್‌ಗ್ಳನ್ನು ಆಯೋಜಿಸುತ್ತಿದ್ದ ಆರೋಪಿಗಳು, ಮಾರಕಾಸ್ತ್ರಗಳು, ಶಸ್ತ್ರಾಸ್ತ್ರಗಳ ಬಳಕೆ ಕುರಿತು ತರಬೇತಿ ನೀಡುತ್ತಿದ್ದರು ಎಂಬುದು ಇವರ ಮೇಲಿನ ಆರೋಪವಾಗಿದೆ.
Advertisement
ಎನ್‌ಐಎ ಅಧಿಕಾರಿಗಳು ರಾಜ್ಯದಲ್ಲಿ ಬಂಧಿಸಿರುವ ಏಳು ಮಂದಿ ಆರೋಪಿಗಳು, ಅಸ್ಸಾಂ, ಬಿಹಾರ, ತಮಿಳುನಾಡು, ಕೇರಳದ ಹಾಗೂ ಇತರ ರಾಜ್ಯಗಳಲ್ಲಿರುವ ಮೂಲಭೂತವಾದಿಗಳ ಜತೆ ನೇರ ಸಂಪರ್ಕದಲ್ಲಿದ್ದರು. ಈ ಆರೋಪಿಗಳ ಜತೆ ರಾಜ್ಯ ಪೊಲೀಸರು ಬಂಧಿಸಿರುವ ಪಿಎಫ್ಐ ಕಾರ್ಯಕರ್ತರು ನಿರಂತರ ಸಂಪರ್ಕದಲ್ಲಿದ್ದು, ಅವರ ಸೂಚನೆ ಮೇರೆಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕ್ಯಾಂಪ್‌ಗಳಲ್ಲಿ ಉತ್ತಮವಾಗಿ ತರಬೇತಿ ಪಡೆದ ಯುವಕರನ್ನು ನಿರ್ದಿಷ್ಟ ಧರ್ಮದ ಮುಖಂಡರು, ಸಾಮಾಜಿಕ ಮತ್ತು ರಾಜಕೀಯ ವ್ಯಕ್ತಿಗಳ ಮೇಲೆ ದಾಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಭಾರತದ ದ್ವೇಷದ ಭಾವನೆ ಸೃಷ್ಟಿಸುತ್ತಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಧಿಕ್ಕರಿಸುವ ಮೂಲಕ ಭಾರತದ ವಿರುದ್ಧ ಅಸಮಾಧಾನ ಮೂಡಿಸುವುದು, ರಾಷ್ಟ್ರದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕುವುದು ಆರೋಪಿಗಳ ಮೂಲ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.