Advertisement
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸತ್ಯವನ್ನು ಮುಚ್ಚಿಡಲು ಹಾಗೂ ಮರೆಮಾಚಲು ಸಾಧ್ಯವಿಲ್ಲ. ಈ ಜಮೀನನ್ನು ದಲಿತ ಸಮುದಾಯದ ನಿಂಗ ಎಂಬವರು 1936ರಲ್ಲಿ 1 ರೂಪಾಯಿಗೆ ತೆಗೆದು ಕೊಂಡಿದ್ದರು. ಇವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಎಂಬ ಮೂವರು ಮಕ್ಕಳಿದ್ದಾರೆ.
Related Articles
Advertisement
2001ರಲ್ಲಿ ಮುಡಾವು ಎಲ್ ಆ್ಯಂಡ್ ಟಿ ಅವರಿಗೆ 11,58,6632 ರೂ.ಗೆ ಬಡಾವಣೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿ, ಅಭಿವೃದ್ಧಿಪಡಿಸಲಾಗಿತ್ತು. 2004ರಲ್ಲಿ 3.15 ಗುಂಟೆಯನ್ನು ಸಿದ್ದ ರಾಮಯ್ಯ ಅವರ ಪತ್ನಿಯ ಅಣ್ಣ ಮಲ್ಲಿಕಾರ್ಜುನಸ್ವಾಮಿ ಅಕ್ರಮವಾಗಿ ಕ್ರಯ ಮಾಡಿಕೊಂಡಿದ್ದರು. 27 ಮಂದಿ ಹಕ್ಕುದಾರರಿದ್ದರೂ ಅಕ್ರಮವಾಗಿ ಮಾಡಿಕೊಂಡಿದ್ದಾರೆ.
1998ರಲ್ಲಿ ಸ್ವಾಧೀನವಾದ ಜಮೀನನ್ನು 2004ರಲ್ಲಿ ಕ್ರಯಕ್ಕೆ ಹೇಗೆ ಮಾಡಿಕೊಂಡರು ಎಂದು ಪ್ರಶ್ನಿಸಿದ ಅವರು, ಮತ್ತೆ 2005ರಲ್ಲಿ ವ್ಯವಸಾಯ ಭೂಮಿಯಿಂದ ನಿವೇಶನದ ಭೂಮಿಯಾಗಿ ಪರಿವರ್ತನೆ ಮಾಡಿದ್ದಾರೆ. 2001ರಲ್ಲೇ ಬಡಾವಣೆ ಕೆಲಸ ನಡೆಯುತ್ತಿತ್ತು. ಆದರೆ 2005ರಲ್ಲಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಡಿಸಿ, ತಹಶೀಲ್ದಾರ್ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ವರದಿ ನೀಡಿದ್ದಾರೆ.
2005ರಲ್ಲಿ ಮುಡಾ ಆಯುಕ್ತರು ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಆಗಿನ ಜಿಲ್ಲಾ ಧಿಕಾರಿ ಇದ್ಯಾವುದೂ ನೋಡದೆ ಕುರುಡರಂತೆ ಭೂ ಪರಿವರ್ತನೆ ಮಾಡಿಕೊಟ್ಟಿದ್ದಾರೆ. ಅಲ್ಲದೆ 2005ರಲ್ಲಿ ಸಿದ್ದರಾಮಯ್ಯ ಪತ್ನಿಯ ಅಣ್ಣ ಕ್ರಯಕ್ಕೆ ತೆಗೆದುಕೊಳ್ಳುವ ಮುನ್ನವೇ ಮುಡಾ 12 ಸೈಟ್‌ಗಳನ್ನು ಅಲಾಟ್ ಮಾಡಲಾಗಿತ್ತು. 12 ಸೈಟುಗಳನ್ನು ಅಲಾಟ್ ಮಾಡಿದ್ದ ಜಮೀನನ್ನು ಹೇಗೆ ಕ್ರಯ ಮಾಡಿಸಿಕೊಳ್ಳಲು ಸಾಧ್ಯ? ಎಂದವರು ಪ್ರಶ್ನಿಸಿದರು.
2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಶಿನ ಕುಂಕುಮಕ್ಕೆ 3.16 ಎಕರೆ ಜಮೀನು ನೀಡಿದ್ದರು. 2014ರಲ್ಲಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದು ನನಗೆ ಬಂದ ಜಮೀನಿನಲ್ಲಿ ಬಡಾವಣೆ ಮಾಡಿದ್ದೀರಾ. ಬದಲಿ ಜಾಗವನ್ನು ನೀಡಿ ಎಂದಿದ್ದರು. ಆಗ ಮುಡಾ ಅ ಧಿಕಾರಿ ಪತ್ರ ಪರಿಶೀಲಿಸಿ ಇದರ ಬಗ್ಗೆ ಚರ್ಚಿಸಿ ಪರಿಗಣಿಸಲಾಗುವುದು ಎಂದು ಮರು ಉತ್ತರ ನೀಡಿದ್ದಾರೆ. 2023ರಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕಾನೂನು ಬಾಹಿರವಾಗಿ ನಿವೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಈ ಎಲ್ಲ ಪ್ರಕ್ರಿಯೆಗಳನ್ನು ಗಮನಿ ಸಿದರೆ ಇದರಲ್ಲಿ ನಿಮ್ಮ ಕೈವಾಡ ಇರುವುದು ಗೊತ್ತಾಗುತ್ತದೆ. ಕೂಡಲೇ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನೀವು ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಡಿಸಿಎಂ ಆಗಿದ್ದಾಗ 3.27 ಲಕ್ಷ ಪರಿಹಾರ ವಿತರಣೆಒಬ್ಬರಿಂದ ಮಾತ್ರ ಸಹಿ ಹಾಕಿಸಿಕೊಂಡು ರಿಜಿಸ್ಟರ್ ಮಾಡಿರುವುದು ನಿಯಮ ಬಾಹಿರ. 1998ರಲ್ಲಿ ಮುಡಾ 3.16 ಎಕರೆ ಜತೆಗೆ ಅಂದು ದೇವನೂರು 3ನೇ ಹಂತದ ಬಡಾವಣೆಗೆ 462 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ಆಗ ದೇವರಾಜು ಎಂಬಾತ ತನ್ನ ಕುಟುಂಬಸ್ಥರಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ. ಆಗಿನ ದರದಂತೆ 3.27 ಲಕ್ಷ ರೂ. ಪರಿಹಾರವನ್ನು ದೇವರಾಜು ಪಡೆದಿದ್ದ. ಆಗ ಇದೇ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು ಎಂದು ಅಶೋಕ್ ದೂರಿದರು.