ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು ಇಂದು ಮಧ್ಯಾಹ್ನದ ನಂತರ ಮತ್ತೆ 14 ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ.ದಾವಣಗೆರೆ ಜಿಲ್ಲೆಯೊಂದರಲ್ಲೇ 12 ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ದಾವಣಗೆರೆಯಲ್ಲಿ ಇತ್ತೀಚೆಗೆ ಒಂದೇ ದಿನ 21 ಸೋಂಕು ಪ್ರಕರಣ ಲಭ್ಯವಾಗಿದ್ದವು. ದಾವಣಗೆರೆಯ ಸೋಂಕಿತ ಸಂಖ್ಯೆ 556 ಮತ್ತು 581ರ ಸಂಪರ್ಕದಿಂದ ಇವರಿಗೆ ಸೋಂಕು ಹರಡಿರುವುದು ದೃಢವಾಗಿದೆ.
ಹಾವೇರಿಯ ಸವಣೂರಿನಲ್ಲಿ ಎರಡನೇ ಸೋಂಕು ಪ್ರಕರಣ ದೃಢವಾಗಿದೆ. ಸೋಂಕಿತ ಸಂಖ್ಯೆ 639ರ ಸಂಪರ್ಕದಿಂದ 40 ವರ್ಷದ ಪುರುಷನಿಗೆ ಸೋಂಕು ತಾಗಿದೆ.
ಮುಂಬೈ ಪ್ರಯಾಣದ ಇತಿಹಾಸವಿರುವ ಧಾರವಾಡದ 26 ವರ್ಷದ ಯುವಕನಿಗೂ ಸೋಂಕು ತಾಗಿರುವುದು ದೃಢವಾಗಿದೆ.
ಇಂದು ಸೋಂಕು ದೃಢವಾದವರಲ್ಲಿ ದಾವಣಗೆರೆಯ 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಉಸಿರಾಟ ಸಮಸ್ಯೆಯಿಂದಲೂ ಈಕೆ ಬಳಲುತ್ತಿದ್ದರು. ಈಕೆಗೆ ಸೋಂಕಿತ ಸಂಖ್ಯೆ 556ರ ದ್ವಿತೀಯ ಸಂಪರ್ಕದಿಂದ ಸೋಂಕು ತಾಗಿತ್ತು.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ. ಇವರಲ್ಲಿ 29 ಸೋಂಕಿತರು ಮರಣ ಹೊಂದಿದ್ದರೆ, 331 ಮಂದಿ ಗುಣಮುಖರಾಗಿದ್ದಾರೆ.