Advertisement

14 ತಿಂಗಳಲ್ಲೇ ಎಸಿ-3 ಎಕಾನಮಿ ಪ್ರಯಾಣಕ್ಕೆ ಬ್ರೇಕ್‌! ಭಾರತೀಯ ರೈಲ್ವೆ ನಿರ್ಧಾರ

07:04 PM Nov 20, 2022 | Team Udayavani |

ನವದೆಹಲಿ: ರೈಲಿನಲ್ಲಿ ಎಸಿ-3 ಎಕಾನಮಿ(3ಇ) ಎಂಬ ಹೊಸ ದರ್ಜೆಯನ್ನು ಪರಿಚಯಿಸಿದ ಕೇವಲ 14 ತಿಂಗಳಲ್ಲೇ ಅದನ್ನು ಸ್ಥಗಿತಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. 3ಇ ದರ್ಜೆಯನ್ನು ಎಸಿ-3ಯೊಂದಿಗೆ ವಿಲೀನಗೊಳಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ವಿಲೀನಗೊಂಡ ಬಳಿಕ ಎಸಿ-3 ದರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

Advertisement

2021ರ ಸೆಪ್ಟೆಂಬರ್‌ನಲ್ಲಿ ರೈಲ್ವೆಯು 3ಇ ಎಂಬ ಹೊಸ ಬೋಗಿಯನ್ನು ಪರಿಚಯಿಸಿತ್ತು. ಅಲ್ಲದೇ, ಈ ಬೋಗಿಯಲ್ಲಿನ ಪ್ರಯಾಣ ದರವು ಎಸಿ-3 ಕೋಚ್‌ಗಳ ದರಕ್ಕಿಂತ ಶೇ.6-8ರಷ್ಟು ಕಡಿಮೆಯಿರಲಿದೆ ಎಂದೂ ಹೇಳಿತ್ತು. ಅದರಂತೆ, ಪ್ರಯಾಣಿಕರು ಕೂಡ “3ಇ’ ಎಂಬ ಪ್ರತ್ಯೇಕ ಕೆಟಗರಿಯಡಿ ಎಸಿ-3 ಎಕಾನಮಿ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದರು. ಆದರೆ, ಇನ್ನು ಮುಂದೆ ಈ ಕೆಟಗರಿ ಲಭ್ಯವಿರುವುದಿಲ್ಲ. ಮುಂದಿನ 4 ತಿಂಗಳಲ್ಲಿ 3ಇ ಯನ್ನು ಎಸಿ-3ಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಎಸಿ-3 ಕೋಚ್‌ಗಳಿಗೆ ಹೋಲಿಸಿದರೆ ಎಸಿ-3 ಎಕಾನಮಿ ಕೋಚ್‌ಗಳಲ್ಲಿ ಲೆಗ್‌ ಸ್ಪೇಸ್‌(ಕಾಲಿಡುವಂಥ ಸ್ಥಳ) ಕಡಿಮೆಯಿತ್ತು. ಆದರೆ, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಸಾಮಾನ್ಯ ಎಸಿ-3 ಕೋಚ್‌ಗಳಲ್ಲಿ 72 ಬರ್ತ್‌ಗಳಿದ್ದರೆ, ಎಸಿ-3 ಎಕಾನಮಿಯ ಪ್ರತಿ ಬೋಗಿಯಲ್ಲೂ 83 ಬರ್ತ್‌ಗಳಿದ್ದವು.

ಇದನ್ನೂ ಓದಿ : ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಖ್ ಚಿಕ್ಕಮ್ಮ ಮಂಗಳೂರಿಗೆ

Advertisement

Udayavani is now on Telegram. Click here to join our channel and stay updated with the latest news.

Next