Advertisement

Journalists: 14 ಪತ್ರಕರ್ತರಿಗೆ ವಿಪಕ್ಷ ಒಕ್ಕೂಟದಿಂದ ಬಹಿಷ್ಕಾರ

11:23 PM Sep 14, 2023 | |

ನವದೆಹಲಿ: ಪ್ರತಿಪಕ್ಷಗಳ ಒಕ್ಕೂಟ ಐಎನ್‌ಡಿಐಎ 14 ಸುದ್ದಿವಾಹಿನಿಗಳು ಮತ್ತು ಅಲ್ಲಿ ಕೆಲಸ ಮಾಡುವ 14 ಮಂದಿ ಪ್ರಮುಖ ಸುದ್ದಿ ವಾಚಕರನ್ನು ಬಹಿ­ಷ್ಕ­ರಿ­­­ಸಲು ಹಾಗೂ ಅವರು ನಡೆಸಿ­ಕೊಂಡುವ ಚರ್ಚೆ­ಗಳಲ್ಲಿ ಭಾಗವಹಿ­ಸದೇ ಇರಲು ತೀರ್ಮಾನಿಸಿದೆ. ಒಕ್ಕೂಟದ ಮಾಧ್ಯಮ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಂಡಿದೆ.

Advertisement

ಬಹಿಷ್ಕಾರಕ್ಕೆ ಒಳಗಾದವರ ಪೈಕಿ ಅರ್ನಾಬ್‌ ಗೋಸ್ವಾಮಿ (ರಿಪಬ್ಲಿಕ್‌), ನವಿಕಾ ಕುಮಾರ್‌ (ಟೈಮ್ಸ್‌ ನೌ), ಆನಂದ ನರಸಿಂಹನ್‌ (ನ್ಯೂಸ್‌18), ಚಿತ್ರಾ ತ್ರಿಪಾಠಿ (ಆಜ್‌ತಕ್‌) ಸೇರಿದ್ದಾರೆ. ನಿರ್ಧಾರ­ವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್‌ನ ಪವನ್‌ ಖೇರಾ “ನಾವು ಯಾವುದೇ ಸುದ್ದಿ ವಾಚಕರಿಗೆ ವಿರೋಧ­ವಾಗಿಲ್ಲ. ಅವರು ನಡೆಸಿಕೊಡುವ ಕಾರ್ಯಕ್ರಮ­ಗಳಲ್ಲಿ ನಮ್ಮ ಒಕ್ಕೂಟದ ನಾಯಕರು, ವಕ್ತಾರರು ಭಾಗವಹಿಸು­ವುದಿಲ್ಲ. ಕೆಲವೊಂದು ಮಾಧ್ಯಮ ಸಂಸ್ಥೆಗಳು ಮತ್ತು ಸುದ್ದಿ ವಾಚಕರು ದ್ವೇಷದ ಅಂಗಡಿ­ಯನ್ನು ಇರಿಸಿಕೊಂಡಿ­ದ್ದಾರೆಂದು ಹೇಳಿದ್ದಾರೆ. ನಿರ್ಧಾರದ ಬಗ್ಗೆ ಆಕ್ಷೇಪ­ವೆತ್ತಿರುವ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್‌ ಆ್ಯಂಡ್‌ ಡಿಜಿಟಲ್‌ ಅಸೋಸಿಯೇಷನ್‌ “ಇಂಥ ನಿರ್ಣಯ ಅಪಾಯಕಾರಿ ಪ್ರವೃತ್ತಿಗೆ ದಾರಿ ಮಾಡಿಕೊಡಲಿದೆ. ಇದು ಪ್ರಜಾಪ್ರಭು­ತ್ವದ ಆಶಯಕ್ಕೆ ಕೊಡಲಿಯೇಟು ನೀಡಲಿದೆ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next