Advertisement

14 ದಿನದ ಬಂದ್: ಅಂತಾರಾಜ್ಯ ಸಂಚಾರಕ್ಕೂ ನಿರ್ಬಂಧ, ಮದ್ಯ ಖರೀದಿಗೆ ಅವಕಾಶ; ಏನಿದೆ? ಏನಿರಲ್ಲ?

02:51 PM Apr 26, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ 14 ದಿನಗಳ ಕಾಲ ಸಂಪೂರ್ಣ ಬಂದ್ ಮಾಡಿ ಆದೇಶಿಸಿದೆ. ಮಂಗಳವಾರ (ಎ.27) ರಿಂದ ಅನ್ವಯವಾಗುವಂತೆ 14 ದಿನಗಳ ಕಾಲ ಲಾಕ್ ಡೌನ್ ಮಾಡಿ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ.

Advertisement

ಈ ಸಮಯದಲ್ಲಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿದಂತೆ ಯಾವುದೇ ಸಾರಿಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಅಂತಾರಾಜ್ಯ ಮತ್ತು ಅಂತರ್ ಜಿಲ್ಲಾ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಸರಕು ಸಾಗಾಣೆ ವಾಹನಗಳಿಗೆ ಅವಕಾಶ ಇರುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ:

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಹಾಲು, ತರಕಾರಿ, ಹಣ್ಣು ಹಂಪಲು ಮುಂತಾದ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮದ್ಯ ಖರೀದಿಗೂ ಅವಕಾಶವನ್ನು ಬೆಳಿಗ್ಗೆ 6 ರಿಂದ 10 ಗಂಟೆಯವರಗೆ ಅವಕಾಶ ನೀಡಲಾಗಿದೆ.

ಮೆಡಿಕಲ್‌ ಶಾಪ್‌, ಬ್ಯಾಂಕ್‌, ಎಟಿಎಂ ಸೇವೆ, ರಕ್ತನಿಧಿ ಕೇಂದ್ರ, ಆಸ್ಪತ್ರೆ, ಕ್ಲಿನಿಕ್‌ಗಳು ಲಾಕ್ ಡೌನ್ ಅವಧಿಯಲ್ಲೂ ತೆರೆದಿರುತ್ತದೆ.

Advertisement

ಗಾರ್ಮೆಂಟ್ ವಲಯವನ್ನು ಬಿಟ್ಟು ಎಲ್ಲ ಉತ್ಪಾದನಾ ವಲಯ, ಕನ್ಸಟ್ರಕ್ಸನ್ ವಲಯಕ್ಕೆ ಅವಕಾಶ ನೀಡಲಾಗಿದೆ. ಕೋವಿಡ್ ಪೀಡಿತರಿಗೆ ಆಮ್ಲಕನಕದ ಕೊರತೆ ಇಲ್ಲ. ಯಾರೂ ಚಿಂತಿಸುವುದು ಬೇಡ. ಅಂಗಡಿ ಮುಂಗಟ್ಟುಕಾರರು ಈ ನಿಯಮಗಳನ್ನು ಪಾಲಿಸಿ, ಪೊಲೀಸ್ ಬಲ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ನಡೆಯಲಿದ್ದ ಎಲ್ಲ ಬಗೆಯ ಚುನಾವಣೆಗಳನ್ನೂ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next