Advertisement

ಆರೋಗ್ಯ ಸೇವೆಗೆ 14 ಬಸ್‌

05:57 PM Apr 11, 2020 | Suhan S |

ರಾಮನಗರ: ಕೋವಿಡ್‌-19 ಸೋಂಕಿನ ಪರಿಣಾಮಕಾರಿ ನಿಯಂತ್ರಣಕ್ಕೆ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ತನ್ನ 14 ಬಸ್‌ಗಳನ್ನು ಆರೋಗ್ಯ ಸೇವೆಗೆ ನಿಯೋಜಿಸಿ, ಸಿಬ್ಬಂದಿಗೆ 1000 ವೈಯಕ್ತಿಕ ರಕ್ಷಣೆ ಕವಚ (ಹಜ್ಮತ್‌ ಸ್ಯೂಟ್‌) ಹಸ್ತಾಂತರಿಸಿದೆ.

Advertisement

ಈ ಸಂಬಂಧ ಕಂಪನಿ ಹೊರಡಿಸಿರುವ ಹೇಳಿಕೆಯಲ್ಲಿ ಟಿಕೆಎಂನ ಭಾರತ ಘಟಕದ ಮುಖ್ಯಸ್ಥರು ಹಾಗೂ ಕಾರ್ಪೊರೇಟ್‌ ಆಡಳಿತದ ಹಿರಿಯ ಉಪಾಧ್ಯಕ್ಷ ವಿಕ್ರಂ ಗುಲಾಟಿ, ರೋಗಗಳ ವಿರುದ್ಧದ ಹೋರಾಟದಲ್ಲಿ ತಮ್ಮ ಸಂಸ್ಥೆ ಸರ್ಕಾರದ ಜೊತೆಯಲ್ಲಿ ನಿಲ್ಲಲಿದೆ. ವೈದ್ಯಕೀಯ ಸಿಬ್ಬಂದಿ ಆರೋಗ್ಯ ರಕ್ಷಣೆಯೂ ಅತೀ ಮುಖ್ಯ. ಹೀಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಸಂಸ್ಥೆಗೆ (ಬಿಎಂಸಿಆರ್‌ಐ) 10 ಬಸ್‌ , ರಾಮನಗರ ಜಿಲ್ಲೆ ಆರೋಗ್ಯ ಇಲಾಖೆಗೆ 4 ಬಸ್‌ ಟೊಯೋಟಾ ಮೊಬಿಲಿಟಿ ಫೌಂಡೇಷನ್‌ ಮೂಲಕ ನಿಯೋಜಿಸಲಾಗಿದೆ. ಈ ಬಸ್‌ಗಳು ಏ.30ವರೆಗೆ ದಿನದ 24 ಗಂಟೆಗಳೂ ಸೇವೆಗೆ ಲಭ್ಯವಿರಲಿವೆ ಎಂದು ತಿಳಿಸಿದ್ದಾರೆ.

ದಾದಿಯರು, ಆರೋಗ್ಯ ಭದ್ರತೆ ತಂಡ ಮತ್ತು ಇತರ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ರಕ್ಷಣೆಯಾಗಿ 1000 ಹಜ್ಮತ್‌ ಸೂಟ್‌ ಗಳನ್ನು (ಡೀಕಂಟಾಮಿನೇಷನ್‌ ಸೂಟ್‌) ಬೆಂಗಳೂರು ವೈದ್ಯಕೀಯ ನಿರ್ದೇಶಕ ಮತ್ತು ಪ್ರಾಂಶುಪಾಲ ಡಾ. ಸಿ.ಆರ್‌ .ಜಯಂತಿ ಅವರಿಗೆ ಹಸ್ತಾಂತರಿಸಲಾಗಿದೆ.

ಅಲ್ಲದೆ ಶೀಘ್ರದಲ್ಲೇ 2000 ಸೂಟ್‌ ಟಿಕೆಎಂ ಹಸ್ತಾಂತರಿಸಲಿದೆ ಎಂದು ತಿಳಿಸಿದ್ದಾರೆ. ತುರ್ತು ಸಂದರ್ಭ ನಿಭಾಯಿಸಲು ಕರ್ನಾಟಕ ಸರ್ಕಾರಕ್ಕೆ ತನ್ನ ಬೆಂಬಲ ಮುಂದುವರಿಸುವ ಸಂಕಲ್ಪಟಿಕೆಎಂ ಮಾಡಿದೆ ಎಂದಿದ್ದಾರೆ. ಟಿಎಂಎಫ್ನ ಏಷ್ಯಾ ಪ್ರದೇಶದ ಕಾರ್ಯಕ್ರಮ ನಿರ್ದೇಶಕ ಪ್ರಸೇಶ ಗಣೇಶ್‌ ಟಿಕೆಎಂ ಇತ್ತೀಚೆಗೆ 1000 ಅಗತ್ಯ ಕಿಟ್‌ಗಳು ಮತ್ತು ಆಹಾರ ಸಾಮಗ್ರಿಗಳನ್ನು ವಿತರಿಸಿದೆ. ದೈನಂದಿನ ಕೂಲಿ ಕಾರ್ಮಿಕರು, ಸಮುದಾಯದಲ್ಲಿ 5000 ಕ್ಕೂ ಹೆಚ್ಚು ಸದಸ್ಯರಿಗೆ ಪ್ರಯೋಜನ ದೊರೆತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next