Advertisement

ಜುಗಾರಿ: 14 ಮಂದಿ ಬಂಧನ, 1.75 ಲಕ್ಷ ರೂ. ನಗದು ವಶ

09:45 PM Jun 07, 2020 | Sriram |

ಮಂಗಳೂರು: ನಗರದ ಬಿಜೈ ಆನೆಗುಂಡಿಯ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಮಂಗಳೂರು ಸಿಸಿಬಿ ಮತ್ತು ಉರ್ವ ಪೊಲೀಸ್‌ ಠಾಣೆಯ ಅಧಿಕಾರಿಗಳು ಜಂಟಿಯಾಗಿ ಭಾನುವಾರ  ದಾಳಿ ಮಾಡಿ ಜುಗಾರಿ ಆಟದಲ್ಲಿ ತೊಡಗಿದ್ದ 14 ಮಂದಿಯನ್ನು ಬಂಧಿಸಿ 1,75,200 ರೂ. ನಗದು, 18 ಮೊಬೈಲ್‌ ಫೋನ್‌, ಇಸ್ಪೀಟ್‌ ಎಲೆ, ಬೆಡ್‌ಶೀಟ್‌ನ್ನು ವಶಪಡಿಸಿಕೊಂಡಿದ್ದಾರೆ.

Advertisement

ಪ್ರಮುಖ ಆರೋಪಿ ಚೇತನ್‌ ಯಾನೆ ಚೇತು ನೇತೃತ್ವದಲ್ಲಿ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌, ಪಿಎಸ್‌ಐ ಕಬ್ಟಾಳ್‌ರಾಜ್‌, ಉರ್ವ ಠಾಣೆಯ ಇನ್‌ಸ್ಪೆಕ್ಟರ್‌ ಮಹಮದ್‌ ಶರೀಫ್‌ ಮತ್ತು ಸಿಬಂದಿ ಈ ದಾಳಿ ಕಾರ್ಯಾಚರಣೆ ನಡೆಸಿದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕ್ಲಬ್‌ಗಳು ಇತ್ತೀಚೆಗೆ ಬಂದ್‌ ಆಗಿವೆ. ಹಾಗಾಗಿ ಈ ಹಿಂದೆ ಕ್ಲಬ್‌ಗಳಲ್ಲಿ ಭಾಗವಹಿಸುತ್ತಿದ್ದವರು ಈಗ ಅಲ್ಲಲ್ಲಿ ಆಯ್ದ ಜಾಗಗಳಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದಾರೆ. ಬೈಕಂಪಾಡಿ ಪರಿಸರದ ವಿವಿಧೆಡೆ ನಡೆಯುತ್ತಿದ್ದ ಜುಗಾರಿ ಅಡ್ಡೆಗಳಿಗೆ ಇತ್ತೀಚೆಗೆ ಪೊಲೀಸರ ಸರಣಿ ದಾಳಿಯಿಂದಾಗಿ ಈ ಜುಗಾರಿ ಅಡ್ಡೆ ನಗರದ ಬಿಜೈ ಮತ್ತಿತರ ತಾಣಗಳಿಗೆ ಸ್ಥಳಾಂತರಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next