Advertisement

ಕೋವಿಡ್ : ರಾಜ್ಯದಲ್ಲಿಂದು 1350 ಪ್ರಕರಣ ಪತ್ತೆ|1648 ಸೋಂಕಿತರು ಗುಣಮುಖ

06:12 PM Aug 21, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕುಗಳ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1350 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 18 ಜನರು ಮೃತ ಪಟ್ಟಿದ್ದಾರೆ ಎದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು( ಆ.21) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 1648 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ‍್ಯೆ 20845 ಇದೆ. ಪಾಸಿಟಿವಿಟಿ ದರ 0.85 % ಇದ್ದು, ಡೆತ್ ರೇಟ್ 1.33% ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-2, ಬೆಳಗಾವಿ-43, ಬೆಂಗಳೂರು ಗ್ರಾಮಾಂತರ-5, ಬೆಂಗಳೂರು ನಗರ-260, ಬೀದರ್-1, ಚಾಮರಾಜನಗರ-6, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-17, ಚಿತ್ರದುರ್ಗ-16, ದಕ್ಷಿಣ ಕನ್ನಡ-320, ದಾವಣಗೆರೆ-15, ಧಾರವಾಡ-5, ಗದಗ-2, ಹಾಸನ-101, ಹಾವೇರಿ-0, ಕಲಬುರಗಿ-2, ಕೊಡಗು-63, ಕೋಲಾರ-17, ಕೊಪ್ಪಳ-0, ಮಂಡ್ಯ-26, ಮೈಸೂರು-102, ರಾಯಚೂರು-0, ಶಿವಮೊಗ್ಗ-50, ತುಮಕೂರು-68, ಉಡುಪಿ-177, ಉತ್ತರ ಕನ್ನಡ-40, ವಿಜಯಪುರ-6, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next