Advertisement

ಬೀದರ್: ಜಿಲ್ಲೆಯಲ್ಲಿ ಮತ್ತೆ ಕೋವಿಡ್ 19 ಆರ್ಭಟ ಜೋರು; 135 ಪಾಸಿಟಿವ್ ಪತ್ತೆ

07:33 PM Aug 02, 2020 | Hari Prasad |

ಬೀದರ್: ಗಡಿನಾಡು ಬೀದರ್ ಜಿಲ್ಲೆಯಲ್ಲಿ ರವಿವಾರದಂದು ಒಂದೇ ದಿನ 135 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

Advertisement

ಆದರೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಾವಿನ ಸಂಖ್ಯೆ ಇಂದು ಇಳಿಕೆಯಾಗಿರುವುದು ಸಮಾಧಾನದ ವಿಷಯವಾಗಿದೆ.

ಒಂದೇ ದಿನದಲ್ಲಿ 135 ಪಾಸಿಟಿವ್ ಪ್ರಕರಣಗಳು ವರದಿಯಾಗುವ ಮೂಲಕ ಜಿಲ್ಲೆಯಲ್ಲಿ ಎರಡನೇ ಬಾರಿ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಮೂರಂಕಿಯನ್ನು ದಾಟಿದಂತಾಗಿದೆ.

ಇಂದಿನ ಒಟ್ಟು ಸೋಂಕಿತರಲ್ಲಿ ಬೀದರ್ ನಗರ ಹಾಗೂ ತಾಲೂಕಿನ 40 ಜನರು ಸೇರಿದ್ದಾರೆ. ಭಾಲ್ಕಿ ತಾಲೂಕಿನ 30 ಜನ, ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕಿನ ತಲಾ 27 ಜನ, ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕಿನ 21 ಜನ, ಔರಾದ ಹಾಗೂ ಕಮಲನಗರ ತಾಲೂಕಿನ 16 ಜನ ಜತೆಗೆ ಅನ್ಯ ರಾಜ್ಯದ ಒಬ್ಬರಲ್ಲಿ ಕೋವಿಡ್19 ಸೋಂಕು ದೃಢಪಟ್ಟಿದೆ.

ಇಂದಿನ 135 ಜನ ಸೋಂಕಿತರು ಸೇರಿ ಈಗ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 2398ಕ್ಕೆ ಏರಿಕೆಯಾಗಿದೆ. ಈ ಪೈಕಿ 79 ಜನರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ರವಿವಾರ 36 ಜನ ಸೇರಿ ಇದುವರೆಗೆ 1580 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ 735 ಸಕ್ರೀಯ ಪ್ರಕರಣಗಳಿವೆ.

Advertisement

ಜಿಲ್ಲೆಯ 50,760 ಜನರ ವರದಿ ತಪಾಸಣೆಯನ್ನು ಇಲ್ಲಿಯತನಕ ಮಾಡಲಾಗಿದ್ದು, ಈ ಪೈಕಿ 47,933 ಮಂದಿಯದ್ದು ನೆಗೆಟಿವ್ ಬಂದಿದೆ. ಇನ್ನೂ 429 ಜನರ ವರದಿ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ ಖಚಿತಪಡಿಸಿದೆ.

ಜಿಲ್ಲೆಯ ಈವರೆಗಿನ ಒಟ್ಟು 2398 ಸೋಂಕಿತ ಪ್ರಕರಣಗಳಲ್ಲಿ ಅತಿ ಹೆಚ್ಚು ಬೀದರ ತಾಲೂಕಿನಲ್ಲಿ 895 ಕೇಸ್, ನಂತರದಲ್ಲಿ ಬಸವಕಲ್ಯಾಣ – ಹುಲಸೂರು ತಾಲೂಕಿನಲ್ಲಿ 457, ಹುಮನಾಬಾದ್- ಚಿಟಗುಪ್ಪ ತಾಲೂಕಿನಲ್ಲಿ 445, ಔರಾದ್ – ಕಮಲನಗರ ತಾಲೂಕಿನಲ್ಲಿ 306, ಭಾಲ್ಕಿ ತಾಲೂಕಿನಲ್ಲಿ 275 ಮತ್ತು ಅನ್ಯ ರಾಜ್ಯ- ಜಿಲ್ಲೆ 17 ಕೋವಿಡ್ 19 ಪ್ರಕರಣಗಳು ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next