Advertisement

ಕೋವಿಡ್ ಸಾವು; 1,30,000 v/s 600: ಏನಿದು ನಾಲ್ಕು ಯುರೋಪ್ ದೇಶಗಳ ಮೋದಿ ಲೆಕ್ಕಾಚಾರ

05:56 PM Jun 26, 2020 | Nagendra Trasi |

ನವದೆಹಲಿ: ಉತ್ತರಪ್ರದೇಶದ ಜನಸಂಖ್ಯೆ ನಾಲ್ಕು ಯುರೋಪ್ ದೇಶಗಳಿಗೆ ಸಮಾನವಾಗಿದ್ದು, ಕೋವಿಡ್ 19 ವೈರಸ್ ನಿಂದ ಯುರೋಪ್ ದೇಶಗಳು ತತ್ತರಿಸಿ ಹೋಗಿವೆ. ಆದರೆ ಉತ್ತರಪ್ರದೇಶಕ್ಕೆ ಹೋಲಿಸಿದರೆ ನಾಲ್ಕು ದೇಶಗಳಲ್ಲಿ ಕೋವಿಡ್ 19 ವೈರಸ್ ಗೆ ಅಪಾರ ಪ್ರಮಾಣದ ಸಾವು ಸಂಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮತ್ತು ಸ್ಪೇನ್ ಈ ನಾಲ್ಕು ದೇಶಗಳು ಒಂದು ಸಮಯದಲ್ಲಿ ವಿಶ್ವದ ಗಮನ ಸೆಳೆದ ಬಲಿಷ್ಠ ದೇಶಗಳಾಗಿದ್ದವು. ಆದರೆ ಒಂದು ವೇಳೆ ನೀವು ಈ ನಾಲ್ಕು ದೇಶಗಳ ಜನಸಂಖ್ಯೆಯನ್ನು ಲೆಕ್ಕ ಹಾಕಿದರೆ ಒಟ್ಟು 24 ಕೋಟಿಯಾಗಬಹುದು, ಆದರೆ ಭಾರತದ ಉತ್ತಪ್ರದೇಶ ರಾಜ್ಯವೊಂದರ ಜನಸಂಖ್ಯೆಯೇ 24 ಕೋಟಿ ಇದೆ. ಆ ನಿಟ್ಟಿನಲ್ಲಿ ಉತ್ತರಪ್ರದೇಶ ಕೋವಿಡ್ 19 ಸೋಂಕಿನ ಬಗ್ಗೆ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದಕ್ಕೆ ಈ ಅಂಕಿಅಂಶವೇ ಸಾಕ್ಷಿಯಾಗಿದೆ. ಕೋವಿಡ್ 19 ಸೋಂಕಿಗೆ ನಾಲ್ಕು ಯುರೋಪ್ ದೇಶಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,30,000. ಆದರೆ ಉತ್ತರಪ್ರದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 600 ಎಂದು ಪ್ರಧಾನಿ ಮೋದಿ ವಿವರಿಸಿದರು.

ಏನೇ ಆಗಲಿ ಸಾವು, ಸಾವೇ ಆಗಿದೆ. ಪ್ರತಿಯೊಂದು ಜೀವದ ವಿಷಯವೇ ಆಗಿದೆ. ಭಾರತದಲ್ಲೇ ಆಗಲಿ ಅಥವಾ ಜಗತ್ತಿನ ಇತರ ದೇಶದಲ್ಲಿಯೇ ಆಗಲಿ ಸಾವು ಎಂಬುದು ತುಂಬಾ ಕೆಟ್ಟ ಸುದ್ದಿಯಾಗಿದೆ ಎಂದರು.

ಅವರು ಶುಕ್ರವಾರ ಆತ್ಮ ನಿರ್ಭರ್ ಉತ್ತರಪ್ರದೇಶ್ ರೋಜ್ಗಾರ್ ಅಭಿಯಾನ್ ಕಾರ್ಯಕ್ರಮವನ್ನು ವಿಡಿಯೋ ಮೂಲಕ ಉದ್ಘಾಟಿಸಿ ಉತ್ತರಪ್ರದೇಶ ಜನರನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ 19 ಸೋಂಕು ತಡೆ ಹಾಗು ವಲಸೆ ಕಾರ್ಮಿಕರ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮೋದಿ ಈ ಸಂದರ್ಭದಲ್ಲಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next