Advertisement

KSRTC: ಸಾರಿಗೆ ಸಂಸ್ಥೆಯ 13 ಸಾವಿರ ಹುದ್ದೆ ಭರ್ತಿ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಘೋಷಣೆ

12:39 AM Aug 20, 2023 | Team Udayavani |

ಬೆಂಗಳೂರು: ಉಚಿತ ಪ್ರಯಾಣದ ಮೂಲಕ ಎಲ್ಲ ಮಹಿಳೆಯರ ಸ್ವಾವಲಂಬನೆ ಯತ್ತ ಸರಕಾರ ಹೆಜ್ಜೆ ಇರಿಸಿದೆ. ಈಗ ಸಾರಿಗೆ ನಿಗಮಗಳ ಬಲವರ್ಧನೆಯತ್ತ ಮುಂದಡಿ ಇಡುತ್ತಿದೆ. ಇದರ ಭಾಗ ವಾಗಿ ಖಾಲಿ ಇರುವ 13 ಸಾವಿರ ಹುದ್ದೆ ಗಳ ನೇಮಕದ ಜತೆಗೆ ಇನ್ನೂ ನಾಲ್ಕು ಸಾವಿರ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.

Advertisement

ನಿರೀಕ್ಷೆಯಂತೆ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಇದ ರಿಂದ ಆದಾಯದಲ್ಲೂ ಏರಿಕೆ ಕಂಡುಬರು ತ್ತಿದೆ. ಇದರ ಜತೆಗೆ 13 ಸಾವಿರ ಖಾಲಿ ಹುದ್ದೆ
ಗಳ ಭರ್ತಿ, 4 ಸಾವಿರ ಹೊಸ ಬಸ್‌ಗಳ ಸೇರ್ಪಡೆ, ಪರ್ಯಾಯ ಆದಾಯ ಮೂಲ ಗಳಿಗೆ ಒತ್ತು ಒಳಗೊಂಡಂತೆ ಸಾರಿಗೆ ನಿಗಮಗಳ ಬಲವರ್ಧನೆಗೆ ಸರಕಾರ ಆದ್ಯತೆ ನೀಡುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಬದಲಾವಣೆ ಯನ್ನು ನಿಗಮಗಳಲ್ಲಿ ಜನ ಕಾಣಲಿ ದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಶನಿವಾರ “ಉದಯವಾಣಿ’ ಬೆಂಗಳೂರು ಕಚೇರಿಗೆ ಭೇಟಿ ನೀಡಿ ಸಂವಾದ ನಡೆಸಿದ ಸಚಿವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಹಿತ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಚಾಲಕ, ನಿರ್ವಾಹಕ, ಮೆಕ್ಯಾನಿಕಲ್‌ ಒಳಗೊಂಡಂತೆ ಸುಮಾರು 16 ಸಾವಿರ ಹುದ್ದೆಗಳು ಖಾಲಿ ಇವೆ. ಈ ಪೈಕಿ ಮುಂದಿನ ಎರಡು-ಮೂರು ತಿಂಗಳಲ್ಲಿ 13 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದರು.

1:2ರ ಅನುಪಾತದಲ್ಲಿ ನೇಮಕ ಮಾಡಿ ಕೊಳ್ಳಲು ಸೂಚನೆ ನೀಡಲಾಗಿದೆ. ಇದರ ಜತೆಗೆ ಅನುಕಂಪದ ಆಧಾರದಲ್ಲಿ ಕೂಡ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ವಿವಿಧ ಹಂತದಲ್ಲಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ದಲ್ಲಿ 55 ನೇಮಕಾತಿ ಆದೇಶಗಳನ್ನು ನೀಡಲಾಗಿದೆ. ಬಿಎಂಟಿಸಿಯಲ್ಲಿ 150 ಹುದ್ದೆಗಳ ನೇಮಕಕ್ಕೆ ಪ್ರಕ್ರಿಯೆಗೆ ಸಿದ್ಧತೆ ನಡೆದಿದೆ.

ದೇಗುಲಗಳಲ್ಲಿ ಸ್ತನ್ಯಪಾನ ಕೊಠಡಿ
ಬೆಂಗಳೂರು: ಪ್ರಮುಖ ದೇಗುಲ ಗಳಲ್ಲಿ ತಾಯಂದಿರು ಮಕ್ಕಳಿಗೆ ಎದೆ ಹಾಲು ಕುಡಿಸಲು ಪ್ರತ್ಯೇಕ ಕೊಠಡಿ ಗಳನ್ನು ತೆರೆಯುವುದು ಸಹಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಸಚಿವರೂ ಆದ ರಾಮಲಿಂಗಾರೆಡ್ಡಿ ತಿಳಿಸಿದರು. “ಶಕ್ತಿ’ ಯೋಜನೆ ಜಾರಿಯಾದ ಅನಂತರ ಮಹಿಳೆಯರು ಹೆಚ್ಚಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ದೇವಾಲಯಗಳ ಆವರಣಗಳಲ್ಲಿ ಮಕ್ಕಳಿಗೆ ಎದೆಹಾಲು ಕುಡಿಸುವ ತಾಯಂದಿರಿಗೆ ಸೂಕ್ತ ಕೊಠಡಿ ವ್ಯವಸ್ಥೆ ಇಲ್ಲ. ಇದಕ್ಕಾಗಿ ವ್ಯವಸ್ಥೆ ಮಾಡುವಂತೆ ಮುಜರಾಯಿ ಇಲಾಖೆಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು. ಶೌಚಾಲಯಗಳು ಮತ್ತು ಸ್ನಾನಗೃಹಗಳ ವ್ಯವಸ್ಥೆ, ಸ್ವತ್ಛತೆಗೆ ಆದ್ಯತೆ ನೀಡಬೇಕು. ಇತರ ಮೂಲಸೌಕರ್ಯಗಳಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next