ಬೆಂಗಳೂರು: ಮನೆಕಟ್ಟಿ ನೋಡು, ಮದುವೆ ಮಾಡಿ ನೋಡುವ ಎನ್ನುವ ಮಾತಿದೆ. ಹಿಂದಿನ ಕಾಲ ದಿಂದಲೂ ಮದುವೆ ಮಾಡುವುದು ಅತ್ಯಂತ ದೊಡ್ಡ ಜವಾಬ್ದಾರಿ ಎನ್ನಲಾಗುತ್ತಿತ್ತು. ಆದರೆ, ಆ ಮಾತನ್ನು ವೆಡ್ಡಿಂಗ್ ಪ್ಲ್ಯಾನರ್ ಗಳು ಸುಳ್ಳಾಗಿದ್ದಾರೆ. ಕೈ ತುಂಬಾ ಹಣ ನೀಡಿದ್ದರೆ ಕಲ್ಯಾಣ ಮಂಟಪದಲ್ಲಿ ಇಂದ್ರ ಲೋಕ ಮರುಸೃಷ್ಟಿಸಿ ಮದುವೆ ಮಾಡಿಸುವ ಸಾಮರ್ಥ್ಯ ವೆಡ್ಡಿಂಗ್ ಪ್ಲ್ಯಾನರ್ ಗೆ ಇದೆ.
ಮದುವೆ ವಿಚಾರ ಬರುತ್ತಿದ್ದಂತೆ ಸಂಬಂಧಿಕರಿಗೆ ಕರೆಯೊಲೆ, ಚಪ್ಪರ, ವಿವಿಧ ಶಾಸ್ತ್ರ- ಮುಹೂರ್ತ, ಜವಳಿ, ಚಿನ್ನಾ ಭರಣ, ಆಮಂತ್ರಣ ಖರೀದಿ, ಮದುವೆಗೆ ಬರುವವರಿಗೆ ಯಾವ ಗಿಫ್ಟ್ ನೀಡಬೇಕು, ಯಾವ ಛತ್ರ ಬುಕ್ ಮಾಡಬೇಕು, ಫೋಟೋಗ್ರಾಫರ್, ವಿಡಿಯೋ ಗ್ರಾಫರ್ ಆಯ್ಕೆ ಸೇರಿದಂತೆ ಹಲವಾರು ವಿಚಾರಗಳು ಹೀಗೆ ಸುಮ್ಮನೆ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಮನೆಯಲ್ಲಿ ಎಷ್ಟೇ ಜನರಿದ್ದರೂ, ಮದುವೆ ಮುಹೂರ್ತವರೆಗೆ ಕೆಲಸ ಮುಗಿದಿಲ್ಲ. ವ್ಯವಸ್ಥೆ ಸರಿ ಯಾಗಿಲ್ಲ ಎನ್ನುವ ಸಾವಿರಾರು ಮಾತು ಕೇಳಿ ಬರುತ್ತವೆ. ಇಂತಹ ಮಾತುಗಳಿಂದ ಮುಕ್ತಿ ಪಡೆದು, ಆರಾಮದಾಯಕವಾಗಿ ಮದುವೆ ಸಮಾರಂಭದಲ್ಲಿ ಓಡಾಡಲು ಅನೇಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಮದು ವೆಯನ್ನು ವೆಡ್ಡಿಂಗ್ ಪ್ಲ್ಯಾನರ್ ಮೂಲಕ ನಡೆಸಲು ಮುಂದಾಗುತ್ತಿದ್ದಾರೆ.
900 ಕೋಟಿ ವ್ಯವಹಾರ: ಮದುವೆ ಆಗೋದು ಒಮ್ಮೆ, ಅದನ್ನು ಅದ್ಧೂರಿಯಾಗಿ ಆಗಬೇಕು. ಇಂತಹ ದೊಂದು ಕ್ರೇಜ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಯಲ್ಲಿ ಇರುವವರೂ ಬೆಂಗಳೂರಿಗೆ ಬಂದು ತಮ್ಮ ಅದ್ಧೂರಿ ಮದುವೆಯ ಪ್ಲ್ರಾನ್ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ನ.12ರಿಂದ ಡಿ. 16ರ ವರೆಗೆ ಕನಿಷ್ಠವೆಂದರೂ 13 ಸಾವಿರಕ್ಕೂ ಅಧಿಕ ಮದುವೆಗಳು ನಡೆಯಲಿವೆ. ಈ ವೇಳೆ ಫ್ಲವರಿಸ್ಟ್, ಡೆಕೊರೇಟರ್, ಸೆಟ್ ಡಿಸೈನರ್, ಶಾಮಿಯಾನಾ, ಬ್ರೆ„ಡಲ್ ಮೇಕಪ್ ಕಲಾವಿದರು, ಛಾಯಾಗ್ರಾಹಕ, ವಿಡಿಯೋಗ್ರಾಫರ್, ಬ್ಯಾಂಡ್, ಲೈಟಿಂಗ್, ಕೇಟರಿಂಗ್, ಮ್ಯೂಸಿಕ್, ಚಿನ್ನಾಭರಣ, ಜ್ಯುವೆಲ್ಲರಿ, ವಾಹನ ಖರೀದಿ ಸೇರಿದಂತೆ ವಿವಿಧ ವಲಯದಲ್ಲಿ ಒಟ್ಟಾರೆ 900 ಕೋಟಿ ರೂ. ವ್ಯವಹಾರ ನಡೆಯುವ ನಿರೀಕ್ಷೆ ಇದೆ ಎಂದು ವೆಡ್ಡಿಂಗ್ ಪ್ಲ್ಯಾನರ್ ಗಳು ಅಂದಾಜಿಸಿದ್ದಾರೆ.
ಡೆಸ್ಟಿನೇಶನ್-ಕ್ರೇಜ್!: ಇಂದು ಯುವ ಪೀಳಿಗೆ ಮಾತ್ರವಲ್ಲದೆ, ಹಿರಿಯರೂ ತಮ್ಮ ಮಕ್ಕಳಿಗೆ ಡೆಸ್ಟಿ ನೇಷನ್ ವೆಡ್ಡಿಂಗ್ ಮಾಡಲು ಬಯಸುತ್ತಾರೆ. ಬೀಚ್, ಅರಮನೆ, ರಮಣೀಯ ಪರಸರ, ಐಷಾರಾಮಿ ಹೋಟೆ ಲ್ಗಳಲ್ಲಿ ಆಪ್ತ ವರ್ಗ ಒಳಗೊಂಡವರ ನಡುವೆ ಮದುವೆ ಯಾಗಲು ಇಚ್ಛಿಸುತ್ತಾರೆ. ಇದರ ಪ್ಲ್ರಾನ್ ಕನಿಷ್ಠ 20-30 ಕೋಟಿ ರೂ.ನಿಂದ ಪ್ರಾರಂಭ ವಾಗಲಿದೆ. ಇದು ವಿಶೇಷವಾಗಿ ಕುಟುಂಬದವರು ಆಯ್ಕೆ ಮಾಡುವ ಸ್ಥಳ ಹಾಗೂ ಪ್ಲ್ಯಾನರ್ ಗಳ ಮೇಲೆ ದರ ನಿಗದಿಯಾಗಲಿದೆ. ಬೆಂಗಳೂರಿನ ಸುತ್ತಮುತ್ತ ಲಿನಲ್ಲಿ ಕಳೆದೊಂದು ತಿಂಗಳಲ್ಲಿ ಸರಾಸರಿ 9 ಡೆಸ್ಟಿ ನೇಶನ್ ವೆಡ್ಡಿಂಗ್ ನಡೆದಿದ್ದು, 17 ಮದುವೆ ನಿಗದಿಯಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಡೆಸ್ಟಿನೇಶ್ ವೆಡ್ಡಿಂಗ್ ಸಂಖ್ಯೆಯಲ್ಲಿ ಶೇ.10 ಏರಿಕೆಯಾಗಿದೆ ವೆಡ್ಡಿಂಗ್ ಪ್ಲಾನರ್ ತಿಳಿಸಿದ್ದಾರೆ.
ಪ್ಲ್ಯಾನರ್-ದುಬಾರಿ ಯಾಕೆ?: ಸಾಧಾರಣವಾಗಿ ಶ್ರೀಮಂತವರ್ಗದವರಿಎಗ ಮದುವೆ ಎಂಬುದು ಶ್ರೀಮಂತಿ ಕೆಯ ಸಂಕೇತವೂ ಆಗಿದೆ. ಎಷ್ಟು ಅದ್ಧೂರಿ ಯಾಗಿ ಮದುವೆ ನಡೆಯುತ್ತದೆಯೋ ಅಷ್ಟು ಶ್ರೀ ಮಂತಿ ಕೆಯ ಪ್ರದರ್ಶನವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ, ಅತಿಥಿಗಳಿಗೆ ನೀಡುವ ಗಿಫ್ಟ್, ಫೋಟೋಗ್ರಾಫಿ, ವಿಡಿಯೋಗ್ರಫಿ ಅತಿಥಿ ಸತ್ಕಾರ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಬಯಸುವುದಿಲ್ಲ. ಶಿಸ್ತು ಬದ್ಧವಾಗಿ ನಡೆಯಬೇಕು ಎನ್ನುವ ಇಂಗಿತ ಅವರದು ಎಂದು ವೆಡ್ಡಿಂಗ್ ಪ್ಲ್ಯಾನರ್ ಅರುಣ್ ಕುಮಾರ್ ತಿಳಿಸಿದ್ದಾರೆ.
ಬಜೆಟ್ಗೆ ತಕ್ಕಂತೆ ಪ್ಲ್ರಾನ್, ಆಫರ್ ವೆಡ್ಡಿಂಗ್ ಪ್ಲ್ಯಾನರ್ ಗಳು ಕುಟುಂಬದ ಮದುವೆ ಬಜೆಟ್ಗೆ ತಕ್ಕಂತೆ ವೆಡ್ಡಿಂಗ್ ಪ್ಲ್ರಾನ್ ಗಳನ್ನು ತಯಾರಿಸುತ್ತಿದ್ದಾರೆ. ಕಲ್ಯಾಣ ಮಂಟಪದಲ್ಲಿ ನಡೆಯುವ ಮಧ್ಯಮ ವರ್ಗದ ಸರಳ ಮದುವೆ ಫುಲ್ ಪ್ಯಾಕೇಜ್ 15 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ಅದ್ಧೂರಿ ಮದುವೆಯ ಫುಲ್ ಪ್ಯಾಕೇಜ್ ಮದುವೆಯು ಕನಿಷ್ಠ ಮೊತ್ತವು 1 ಕೋಟಿ ರೂ.ನಿಂದ ಪ್ರಾರಂಭವಾಗಲಿದೆ. ಈ ಪ್ಲ್ರಾನ್ಗಳ ಅನ್ವಯ 2 ಕುಟುಂಬದವರು ಕೇವಲ ಮದುವೆ ಮುಹೂರ್ತ ಹಾಗೂ ಶಾಸ್ತ್ರಗಳಿಗೆ ಸಂಬಂಧಿಸಿದ ಕೆಲಸದಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕು. ಉಳಿದೆಲ್ಲ ಕೆಲಸವೂ ವೆಡ್ಡಿಂಗ್ ಪ್ಲ್ಯಾನರ್ ಗಳೇ ಮಾಡಲಿದ್ದಾರೆ.
ಸ್ಟಾರ್ಗಳೂ ಬರಬೇಕು!
ಕೆಲವರು ಮದುವೆಯಲ್ಲಿ ಸಿನಿಮಾ ನಟಿ-ನಟಿ ಯರು, ಧಾರಾವಾಹಿ ಕಲಾವಿದರು ಬರಬೇಕು ಎನ್ನುವುದು ಸೇರಿದಂತೆ ನೂರಾರು ಡಿಮ್ಯಾಂಡ್ ಗಳು ಕುಟುಂಬಸ್ಥರಿಂದ ಬರುತ್ತದೆ. ಅವರ ಬೇಡಿಕೆ ಹೆಚ್ಚಿದಂತೆ ಪ್ಲ್ಯಾನರ್ ಬೆಲೆಯು ಏರಿಕೆಯಾಗುತ್ತದೆ
–ಅರುಣ್ ಕುಮಾರ್, ವೆಡ್ಡಿಂಗ್ ಪ್ಲ್ಯಾನರ್
-ತೃಪ್ತಿ ಕುಮ್ರಗೋಡು