Advertisement
ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಇದುವರೆಗೆ 24 ಮಂದಿ ಡೆಂಗ್ಯೂನಿಂದ ಮೃತಪಟ್ಟಿರುವುದಾಗಿ ವರದಿ ನೀಡಿದ್ದು ಆದರೆ ಖಾಸಗಿ ಆಸ್ಪತ್ರೆಗಳ ದತ್ತಾಂಶವನ್ನೂ ಸೇರಿಸಿದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ.
Related Articles
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಬ್ರಜೇಶ್ ಪಾಠಕ್ ಅವರು ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆಗಳನ್ನು ನೀಡಿದ್ದಾರೆ. ಇದಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ರಚಿಸುವಂತೆ ಹೇಳಿಕೊಂಡಿದ್ದಾರೆ.
Advertisement
ಲಕ್ನೋದಲ್ಲಿರುವ ಆಸ್ಪತ್ರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಡೆಂಗ್ಯೂ ರೋಗಿಗಳಿಗೆ ಡಯಾಲಿಸಿಸ್ ಮತ್ತು ವೆಂಟಿಲೇಟರ್ ಬೆಂಬಲದ ಅಗತ್ಯವಿದೆ. ಪ್ರಮುಖ ಆಸ್ಪತ್ರೆಗಳ ಎಲ್ಲಾ ಹಾಸಿಗೆಗಳು ಡೆಂಗ್ಯೂ ರೋಗಿಗಳಿಂದ ತುಂಬಿವೆ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Bagalakote: ಕಾಣೆಯಾಗಿದ್ದ ಲಾಯರ್ ಶವವಾಗಿ ಪತ್ತೆ… ಕಲ್ಲಿನಿಂದ ಜಜ್ಜಿ ಕೊಂದಿರುವ ಶಂಕೆ