Advertisement

ಕಾಂಗ್ರೆಸ್‌ ಸರ್ಕಾರದಿಂದಲೂ 1300 ಎಕರೆ ಡಿನೋಟಿಫೈ?

03:08 PM Sep 14, 2017 | |

ಬೆಂಗಳೂರು: ಆಡಳಿತರೂಢ ಕಾಂಗ್ರೆಸ್‌ ಸರ್ಕಾರ 200ಕ್ಕೂ ಅಧಿಕ ಮಂದಿ ಭೂ ಮಾಲೀಕರ ಜಮೀನು ಸೇರಿದಂತೆ 1300
ಎಕರೆ ಜಮೀನು ಡಿನೋಟಿಫೈ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಅಚ್ಚರಿಯ ಸಂಗತಿಯೆಂದರೆ ರಾಜ್ಯಸರ್ಕಾರ ಜಮೀನು ಕೈ ಬಿಟ್ಟ ಅರ್ಜಿಗಳಲ್ಲಿ ಹಾಲಿ ಸಚಿವರೊಬ್ಬರು ಮೃತ ವ್ಯಕ್ತಿಯೊಬ್ಬರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಬಿಡಿಎ ಸದಸ್ಯರಾಗಿದ್ದ ಕಾಂಗ್ರೆಸ್‌ ಶಾಸಕ ಭೈರತಿ ಬಸವರಾಜು ಮನವಿ ಅರ್ಜಿ ಮೇರೆಗೆ ಅವರ ಜಮೀನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿದೆ ಎಂಬ ಆರೋಪ ಸೇರಿದಂತೆ 100ಕ್ಕೂ ಹೆಚ್ಚು ಮಹತ್ವದ ದಾಖಲೆಗಳನ್ನು ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

Advertisement

ರಾಜ್ಯಸರ್ಕಾರ ನಡೆಸಿರುವ 1300 ಎಕರೆ ಡಿನೋಟಿಫಿಕೇಶನ್‌ ಪೈಕಿ 2014ರ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿಯೇ ಒಟ್ಟು 750 ಎಕರೆಗೂ ಅಧಿಕ ಜಮೀನನ್ನು ಡಿನೋಟಿಫೈ ಮಾಡಲಾಗಿದ್ದು, ಲೋಕಸಭೆ ಚುನಾವಣೆ ವೇಳೆಯಲ್ಲಿಯೇ ಈ ಅಕ್ರಮ ನಡೆಸಲಾಗಿದೆ ಎಂದು ಯಡಿಯೂರಪ್ಪ ಪರ ವಕೀಲರು ಆರೋಪಿಸಿದ್ದಾರೆ. 

ಭೈರತಿ ಬಸವರಾಜು ಸೂಚನೆ ಮೇರೆಗೆ 10 ಎಕರೆ 35 ಗುಂಟೆ ಡಿನೋಟಿಫೈ!:
ಕುತೂಹಲದ ಸಂಗತಿ ಎಂದರೆ ಬಿಡಿಎ ಸದಸ್ಯ ಶಾಸಕ ಭೈರತಿ ಬಸವರಾಜು, ಯಲಹಂಕ ಹೋಬಳಿ ರಾಮಗೊಂಡನ  ಹಳ್ಳಿಯ ವಿವಿಧ ಸರ್ವೇನಂಬರ್‌ ಗಳಲ್ಲಿರುವ 10.37.5 ಗುಂಟೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ 2014ರ ಮೇ 9ರಂದು ಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಬಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿ -2 ಬಿಡಿಎ ಕಾಯ್ದೆ ಕಲಂ 17(5) ಅಧಿಕಾರ ಚಲಾಯಿಸಿ, ರಾಮಗೊಂಡನಹಳ್ಳಿಯ ಸರ್ವೆ ನಂಬರ್‌ 21/ 2ರಲ್ಲಿ 2 ಎಕರೆ 7 ಗಂಟೆ , 21/2, 24ಬಿ, 25/1, 26, 60ರ ಸರ್ವೇನಂಬರ್‌ ಗಳಲ್ಲಿ ಒಟ್ಟು 10.37.5 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ. ಈ ಸಂಬಂಧ ಬಿಡಿಎ ಉಪ ಆಯುಕ್ತರು ಜೂನ್‌ 18ರಂದು ತಾವು ಕೋರಿದಂತೆ ರಾಮಗೊಂಡನಹಳ್ಳಿಯ 10.ಎಕರೆ 37.5 ಗುಂಟೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಮುಂದುವರಿ ಸುವುದಿಲ್ಲ ಎಂದು ಭೈರತಿ ಬಸವರಾಜು ಅವರಿಗೆ ಹಿಂಬರವನ್ನು ನೀಡಿದ್ದಾರೆ ಎಂದೂ ಆರೋಪಿಸಲಾಗಿದೆ.

ಇನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ರಾಮಗೊಂಡನಹಳ್ಳಿಯ ಕೆಲ ಜಮೀನು  ಗಳು ಭೈರತಿ ಬಸವರಾಜ್‌ ಹಾಗೂ ಅವರ
ಸಂಬಂಧಿಕರಿಗೆ ಸೇರಿವೆ ಎನ್ನಲಾಗುತ್ತಿದೆ. ಡಿನೋಟಿಫೈ ಆಗಿರುವ ಜಮೀನುಗಳ ಸರ್ವೇನಂಬರ್‌ಗಳಲ್ಲಿ ಬಸವರಾಜು
ಎಂಬ ಹೆಸರಿದ್ದು, ಪ್ರತ್ಯೇಕ ಸರ್ವೇನಂಬರ್‌ಗಳಲ್ಲಿ ಎಸ್‌ ಧನಲಕ್ಷ್ಮೀ ಎಂಬುವವರ ಹೆಸರುಗಳಿವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next