Advertisement

ತುಕ್ಕು ಹಿಡಿದ 130 ರಿಯೋ ಒಲಿಂಪಿಕ್ಸ್‌ ಪದಕ ವಾಪಸ್‌!

03:52 PM May 21, 2017 | Team Udayavani |

ಸಾವೋ ಪಾಲೋ: ರಿಯೋ ಒಲಿಂಪಿಕ್ಸ್‌ ವೇಳೆ ಪದಕ ವಿಜೇತರಿಗೆ ನೀಡಿದ 130 ಪದಕಗಳಿಗೆ ತುಕ್ಕು ಹಿಡಿದಿದೆಯಂತೆ. ಇದರಲ್ಲಿ ಕಂಚಿನ ಪದಕಗಳೇ ಜಾಸ್ತಿ. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಅಂಗವಿಕಲ ಅಥ್ಲೀಟ್‌ಗಳ ಪದಕಗಳಿಗೂ ಇದೇ ಸ್ಥಿತಿ ಉಂಟಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಸದ್ಯ ತುಕ್ಕು ಹಿಡಿದ ಪದಕಗಳನ್ನು ಸಂಘಟಕರಿಗೆ ವಾಪಸ್‌ ಮಾಡಲಾಗಿದೆ.

Advertisement

ಏಕೆ ಹೀಗೆ?: ಕೆಲವರು ಪದಕ ಕೆಳಕ್ಕೆ ಬೀಳಿಸಿರುವುದರಿಂದ ಅಥವಾ ಬೇಕಾಬಿಟ್ಟಿಯಾಗಿ ಇಟ್ಟುಕೊಂಡಿರುವುದರಿಂದ, ಇನ್ನು ಕೆಲ ಸಲ ಹೆಚ್ಚು ಶೀತ ಪ್ರದೇಶದಲ್ಲಿ ಇಟ್ಟಿದ್ದರಿಂದ ಪದಕಕ್ಕೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಅಂಡ್ರಾಡ ಸ್ಪಷ್ಟನೆ ನೀಡಿದ್ದಾರೆ. ಪದಕಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಂಡಿವೆ. ಕೆಲ ಪದಕಗಳ ಬಣ್ಣವೇ ಹೋಗಿದೆ. ಕಳೆದ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಪ್ರಕರಣ
ವರದಿಯಾಗಿತ್ತು. ಅಲ್ಲಿಂದ ಇಂತಹ ಪದಕಗಳ ಸಂಖ್ಯೆ 130ಕ್ಕೇರಿದೆ. ಒಲಿಂಪಿಕ್ಸ್‌ ವೇಳೆ ಒಟ್ಟು 2,488 ಪದಕವನ್ನು
ತಯಾರಿಸಲಾಗಿತ್ತು. ಇದರಲ್ಲಿ 100 ಪದಕ ಪ್ಯಾರಾಲಿಂಪಿಕ್ಸ್‌ ಗಾಗಿ ಮೀಸಲಿಡಲಾಗಿತ್ತು. ಇದರಲ್ಲಿ ಬೆಳ್ಳಿ ಮತ್ತು ಕಂಚಿನ
ಪದಕವನ್ನು ಶೇ.30 ಮರುಬಳಕೆಯ ವಸ್ತುಗಳಿಂದ ತಯಾರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next