ಬೆಂಗಳೂರು : ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 2017-ಧಿ18ನೇ ಸಾಲಿಗೆ ನಲ್ಲಿ ಲಭ್ಯವಿರುವ ಲಭ್ಯವಿರುವ 1.30 ಲಕ್ಷ ಆರ್‌ಟಿಇ ಸೀಟಿಗೆ 2.10 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.
ಅರ್ಜಿ ಸಲ್ಲಿಸಲು ಏ.15 ಕೊನೆಯ ದಿನವಾಗಿದ್ದು, ಸಾರ್ವನಿಕ ಶಿಕ್ಷಣ ಇಲಾಖೆಯಲ್ಲಿ ಅರ್ಜಿ ಪರಿಶೀಲನೆ ನಡೆಯುತ್ತಿದ್ದು, ಆಧಾರ್ ಸಂಖ್ಯೆ ನೀಡಿರುವ ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಪರಿಶೀಲನಾ ಪ್ರಕ್ರಿಯೆ ಮುಗಿದ ನಂತರ ಮೊದಲ ಹಂತದ ಆನ್‌ಲೈನ್ ಲಾಟರಿ ಪ್ರಕ್ರಿಯೆ ನಡೆಯಲಿದ್ದು, ಉಳಿದ ಸೀಟುಗಳಿಗೆ ಎರಡನೇ ಹಂತದ ಲಾಟರಿ ಪ್ರಕ್ರಿಯೆ ನಡೆಸಲಾಗುವುದು.
ಆನ್‌ಲೈನ್ ಲಾಟರಿ ಮೂಲಕ ಆರ್‌ಟಿಇ ಸೀಟಿಗೆ ಆಯ್ಕೆಯಾದ ಮಗುವಿನ ಪಾಲಕರ ಮೊಬೈಲ್‌ಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಆ ಸಂದೇಶ ಪ್ರಕಾರ ಸಂಬಂಧಪಟ್ಟ ಶಾಲೆಗೆ ನಿರ್ದಿಷ್ಟ ದಿನದೊಳಗೆ ಮಗುವಿನ ದಾಖಲಾತಿ ಮಾಡಬೇಕು.
ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಆರ್‌ಟಿಇ ಅರ್ಜಿ ವರ್ಗಾಯಿಸಲು ಬರುವುದಿಲ್ಲ. ಆರ್‌ಟಿಇ ಸೀಟು ಪಡೆದ ಮಗುವಿನ ಪಾಲಕರು ವರ್ಗಾವಣೆ ಹೊಂದಿದರೂ, ಬೇರೆ ಶಾಲೆಗೆ ಮಗುವನ್ನು ಆರ್‌ಟಿಇ ಅಡಿಯಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ಆಧಿಕಾರಿಗಳು ತಿಳಿಸಿದ್ದಾರೆ.