ಢಾಕಾ: ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲು ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟು, 100 ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದಲ್ಲಿ ಸೋಮವಾರ(ಅ.23 ರಂದು) ನಡೆದಿದೆ.
ಕಿಶೋರ್‌ಗಂಜ್‌ನಿಂದ ಢಾಕಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಸಂಜೆ 4:15 ರ ಸುಮಾರಿಗೆ ಸರಕು ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಈ ದಾರುಣ ಘಟನೆ ಸಂಭವಿಸಿದೆ. ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದು,100 ಮಂದಿ ಗಾಯಗೊಂಡಿದ್ದಾರೆ.
ಇದುವರೆಗೆ 13 ಶವಗಳು ಪತ್ತೆಯಾಗಿವೆ ಎಂದು ಭೈರಬ್ ರೈಲ್ವೆ ನಿಲ್ದಾಣದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಸ್ಥಳೀಯ ವಾಹನಿಯೊಂದು ವರದಿ ಮಾಡಿದೆ.
ದೇಹಗಳು ನಜ್ಜುಗುಜ್ಜಾಗಿ ಬೋಗಿಗಳ ಅಡಿಯಲ್ಲಿ ಸಿಲುಕಿಕೊಂಡ ಪರಿಣಾಮ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸರ್ಕಾರಿ ಆಡಳಿತಾಧಿಕಾರಿ ಸಾದಿಕುರ್ ರೆಹಮಾನ್ ಹೇಳಿದ್ದಾರೆ.
ಕಳಪೆ ಸಿಗ್ನಲಿಂಗ್, ನಿರ್ಲಕ್ಷ್ಯ, ಹಳೆಯ ಟ್ರ್ಯಾಕ್‌ಗಳು, ಇತರೆ ಕಡಿಮೆ ಮೂಲಸೌಕರ್ಯ ಕೊರತೆಗಳಿಂದ ಬಾಂಗ್ಲಾದೇಶದಲ್ಲಿ ರೈಲು ಅಪಘಾತಗಳು ಸಾಮಾನ್ಯವಾಗಿದೆ.