Advertisement

ಕೊಪ್ಪದಲ್ಲಿ 13 ಜನರಿಗೆ ಕೋವಿಡ್‌ ಸೋಂಕು ದೃಢ

10:40 AM Jul 21, 2020 | Suhan S |

ಕೊಪ್ಪ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು. ಸೋಮವಾರ ಒಂದೇ ದಿನ 13 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸುಭಾಷ್‌ ರಸ್ತೆಯ 52 ವರ್ಷದ ವ್ಯಕ್ತಿಯಿಂದ ಇಲ್ಲಿನ ಸಾರ್ವಜನಿಕ ಆಸ್ವತ್ರೆಯ ಇಬ್ಬರಿಗೆ ಹಾಗೂ 10 ಜನರಿಗೆ ಸೋಂಕು ಹರಡಿರುವುದಾಗಿಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.

Advertisement

ಸುಭಾಷ್‌ ರಸ್ತೆಯ 52 ವರ್ಷದ ವ್ಯಕ್ತಿಯಿಂದ 12 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೂ ಸೋಂಕು ಅಂಟಿದೆ. ಆಸ್ಪತ್ರೆಯ ಸಿಬ್ಬಂದಿಯಾದ ಗುಣವಂತೆ ರಸ್ತೆಯ 29 ವರ್ಷದ ಮಹಿಳೆ ಹಾಗೂ ತ್ಯಾಗರಾಜ ರಸ್ತೆ 34 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಅವರ ಸಂಪರ್ಕದಲ್ಲಿದ್ದ ಕೆಸವೆ ರಸ್ತೆ 19 ವರ್ಷದ ಪುರುಷ ಹಾಗೂ 46ರ ಮಹಿಳೆ, ಅಚ್ಚರಡಿ 32 ವರ್ಷದ ಪುರುಷ, ಅಯ್ಯಂಗಾರ್‌ ಲೇಔಟ್‌ನ 42 ವರ್ಷದ ಪುರುಷ, ಸುಭಾಷ್‌ ರಸ್ತೆ 43 ವರ್ಷದ ಪುರುಷ, ಸುಭಾಷ್‌ ರಸ್ತೆ 46 ಮಹಿಳೆ, 22 ಪುರುಷ, 13 ಬಾಲಕಿ, 10 ವರ್ಷದ ಹುಡುಗ ಮತ್ತು ಎಸ್‌.ವಿ.ಟಿ. ರಸ್ತೆ 52 ಪುರುಷನಿಗೆ ಸೋಂಕು ತಗುಲಿದೆ.

ಸಕಲೇಶಪುರದಿಂದ ತುಳುವಿನಕೊಪ್ಪ ಗ್ರಾಪಂ ಹೇರಾಂಭಪುರ ಗ್ರಾಮಕ್ಕೆ ಬಂದಿದ್ದ 26 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 13 ಜನರಿಗೆ ಜು. 11 ರಂದು ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ಸೋಂಕು ತಗುಲಿರುವುದಾಗಿ ವರದಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next