ಅಮೇರಿಕಾ: ತನ್ನ ಮನೆಯ ಬಳಿ ಮಹಿಳೆಯೊಬ್ಬರು ಕಾರು ಚಲಾಯಿಸುತ್ತಿದ್ದ ವೇಳೆ ತನ್ನ 13 ತಿಂಗಳ ಹೆಣ್ಣು ಮಗುವೊಂದು ಕಾರಿನಡಿಗೆ ಬಿದ್ದು ಮೃತಪಟ್ಟಿರುವ ಹೃದವಿದ್ರಾವಕ ಘಟನೆಯೊಂದು ಅಮೇರಿಕಾದ ಅರಿಝೋನಾ ರಾಜ್ಯದಲ್ಲಿ ನಡೆದಿದೆ ಎಂದು NBC ನ್ಯೂಸ್ ವರದಿ ಮಾಡಿದೆ.
ಮೃತ ಬಾಲಕಿಯನ್ನು 13 ತಿಂಗಳ ಸೈರಾ ರೋಸ್ ಥೋಮಿಂಗ್ ಎಂದು ಗುರುತಿಸಲಾಗಿದೆ.
ಘಟನೆ ವಿವರ: ಕುಟುಂಬದ ಕಾಟನ್‌ವುಡ್‌ನ ಮನೆಯ ಬಳಿ ಕಳೆದ ಗುರುವಾರ ಘಟನೆ ನಡೆದಿದ್ದು, ಮಹಿಳೆಗೆ ತನ್ನ ಕಚೇರಿಯಿಂದ ತುರ್ತು ಕರೆ ಬಂದಿದೆ ಈ ವೇಳೆ ತನ್ನ ಮಗುವನ್ನು ಕರೆದುಕೊಂಡು ಕಚೇರಿಗೆ ತೆರಳಲು ಕಾರಿನ ಬಳಿ ತೆರಳಿದ್ದಾರೆ.
ಆದರೆ ಕಲ್ಲುಗಳಿಂದ ಕೂಡಿದ ಇಕ್ಕಟ್ಟಾದ ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದ ಕಾರಣ ಮಗುವನ್ನು ಕಾರಿನಿಂದ ಕೆಲವು ದೂರದಲ್ಲಿ ನಿಲ್ಲಿಸಿ ಕಾರು ತಿರುಗಿಸಲು ಹೋಗಿದ್ದಾರೆ ಆದರೆ ಕಲ್ಲುಗಳಿಂದ ತುಂಬಿದ್ದ ರಸ್ತೆಯಲ್ಲಿ ಕಾರನ್ನು ತೆಗೆಯಲು ಹಿಂದಕ್ಕೆ ತೆಗೆದಾಗ ಅಲ್ಲಿದ್ದ ಮರದ ಕೊಂಬೆಗೆ ಕಾರಿನ ಬಂಪರ್ ಸಿಕ್ಕಿಕೊಂಡಿದೆ ಹಾಗಾಗಿ ಮಹಿಳೆ ಸ್ವಲ್ಪ ವೇಗವಾಗಿ ಕಾರನ್ನು ಮುಂದಕ್ಕೆ ಚಲಾಯಿಸಲು ಹೋದ ವೇಳೆ ಕಾರು ವೇಗವಾಗಿ ಬಂದು ಎದುರಿಗಿದ್ದ ಮಗುವಿಗೆ ಡಿಕ್ಕಿ ಹೊಡೆದಿದೆ.
ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಪುಟ್ಟ ಮಗುವನ್ನು ವರ್ಡೆ ವ್ಯಾಲಿ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು YCSO ಕ್ರಿಮಿನಲ್ ಇನ್ವೆಸ್ಟಿಗೇಷನ್ಸ್ ಬ್ಯೂರೋ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಸಂತೆಕಟ್ಟೆ: ಸಾರ್ವಜನಿಕರ ಕಣ್ಣೆದುರೇ ಕುಸಿದು ಬಿದ್ದ ಓವರ್ ಪಾಸ್ ತಡೆಗೋಡೆ… ಹೆಚ್ಚಿದ ಆತಂಕ