ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕ ಶರತ್ ಶವಯಾತ್ರೆಯ ಸಂದರ್ಭ ನಡೆದ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 20 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ 13 ಮಂದಿಯನ್ನು ಬಂಧಿಸಲಾಗಿದೆ.
Advertisement
ನೌಫಾಲ್ ಸುಹೇಲ್, ಅಬ್ದುಲ್ ಸಲೀಂ, ಮಹಮ್ಮದ್ ಶರೀಫ್, ಸಯ್ಯದ್ ಆಫ್ರೀದಿ, ಉಸೇನ್ ಮೊರಿಸ್, ಉಮ್ಮರ್ ಶಾಫಿ, ಮಹಮ್ಮದ್ ಫಾರೂಕ್, ಜಬ್ಟಾರ್, ಮೊಹಮ್ಮದ್ ಕಾಲಿದ್, ಮಹಮ್ಮದ್ ಜುನೈನ್, ಇನ್ಸಾಮ್ ಉಲ್‌ಹಕ್, ಅಕ್ಷಿತ್, ಸದಾನಂದ ನಾವೂರ ಬಂಧಿತರು. ಆರೋಪಿಗಳಲ್ಲಿ ಕೆಲವರು ಹೊರರಾಜ್ಯದವರು ಎಂದು ಹೇಳಲಾಗಿದ್ದು ಅವರ ವಿಳಾಸ ತಪಾಸಣೆಯ ಬಳಿಕವಷ್ಟೆ ಸ್ಪಷ್ಟವಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು: ಶರತ್ ಮಡಿವಾಳ ಹತ್ಯೆ ಖಂಡಿಸಿ ಜು. 7ರಂದು ಬಿ.ಸಿ.ರೋಡಿನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ನಡೆದ ಪ್ರತಿಭಟನೆ ಮತ್ತು ಶರತ್ ಶವ ಯಾತ್ರೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಪ್ರತಿಭಟನೆ ಮತ್ತು ಮೆರವಣಿಗೆಯ ಸಂಘಟಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.
Related Articles
Advertisement
ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಬಜರಂಗದಳ ರಾಜ್ಯ ಸಂಯೋಜಕ ಶರಣ್ ಪಂಪ್‌ವೆಲ್, ಮುರಲಿಕೃಷ್ಣ ಹಸಂತಡ್ಕ ಹಾಗೂ ಪ್ರದೀಪ್ ಪಂಪ್‌ವೆಲ್ ವಿರುದ್ಧ ಸೆಕ್ಷನ್ 143, 147, 148, 149, 188, 308, 353, 427, 504 ಹಾಗೂ ಸೆಕ್ಷನ್ 2ಎ ಅಡಿ ಯಲ್ಲಿ ಪ್ರಕರಣ ಪೊಲೀಸರು ಸ್ವಯಂ ಪ್ರಕರಣ ದಾಖ ಲಿಸಿದ್ದಾರೆ. ಈ ಐದು ಮಂದಿಯಲ್ಲದೆ ಇತರರು ಎಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖೀಸಲಾಗಿದೆ.
ಸತ್ಯಜಿತ್ ಮನೆಗೆ ದಾಳಿಕಲ್ಲು ತೂರಾಟ ಪ್ರಕರಣದ ಆರೋಪಿಗಳಾದ ಸತ್ಯಜಿತ್‌ನ ಸುರತ್ಕಲ್ ಮನೆಗೆ, ಪ್ರದೀಪ್ ಪಂಪ್‌ವೆಲ್ ಮನೆಗೆ ಬಂಟ್ವಾಳ ಪೊಲೀಸರ ತಂಡ ರವಿವಾರ ರಾತ್ರಿ ದಾಳಿ ನಡೆಸಿದೆ. ಆದರೆ ಈ ಸಂದರ್ಭ ಇಬ್ಬರೂ ಮನೆಯಲ್ಲಿರಲಿಲ್ಲ ಎನ್ನಲಾಗಿದೆ.ಹಿಂದೂ ಮುಖಂಡರ ವಿರುದ್ಧ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಲಾಗಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿವೆಯಾದರೂ ಪೊಲೀಸರು ಇದನ್ನು ಖಚಿತ ಪಡಿಸುತ್ತಿಲ್ಲ.