Advertisement

Bypoll: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ನೀರಸ ಮತದಾನ

12:36 PM Jul 10, 2024 | Team Udayavani |

ನವದೆಹಲಿ: ಬಿಹಾರ, ಪಶ್ಚಿಮಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಾಖಂಡ್‌, ಪಂಜಾಬ್‌, ಹಿಮಾಚಲ್‌ ಪ್ರದೇಶ ಸೇರಿದಂತೆ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಬುಧವಾರ (ಜುಲೈ 10) ಬೆಳಗ್ಗೆ ಆರಂಭಗೊಂಡಿದ್ದು, ನಿಧಾನಗತಿಯಲ್ಲಿ ಮತದಾನ ನಡೆಯುತ್ತಿದೆ.

Advertisement

ಇದನ್ನೂ ಓದಿ:Davanagere: ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಪ್ರಕರಣ; ದಂಪತಿ ಸಾವು

ದೇಶದಲ್ಲಿ ಲೋಕಸಭೆ ಚುನಾವಣೆ ನಡೆದ ನಂತರ ನಡೆಯುತ್ತಿರುವ ವಿಧಾನಸಭೆಯ ಮೊದಲ ಉಪಚುನಾವಣೆ ಇದಾಗಿದೆ. ಪಶ್ಚಿಮಬಂಗಾಳದ ರಾಜ್‌ ಗಂಜ್‌, ರಾಣಾಘಾಟ್‌ ದಕ್ಷಿಣ್‌, ಬಾಗ್ಡಾ ಮತ್ತು ಮಾಣಿಕ್‌ ತಾಲಾ, ಹಿಮಾಚಲ್‌ ಪ್ರದೇಶದ ಡೆಹ್ರಾ, ಹಮೀರ್‌ ಪುರ್‌ ಮತ್ತು ನಾಲಾಗಢ್‌, ಉತ್ತರಾಖಂಡ್‌ ನ ಬದರಿನಾಥ್‌, ಮಂಗ್ಲೌರ್‌, ಪಂಜಾಬ್‌ ನ ಜಲಂಧರ್‌, ಬಿಹಾರದ ರೂಪಾಲಿ, ತಮಿಳುನಾಡಿನ ವಿಕ್ರವಂಡಿ, ಮಧ್ಯಪ್ರದೇಶದ ಅಮರಾವರಾದಲ್ಲಿ ಉಪ ಚುನಾವಣೆ ನಡೆಯುತ್ತಿದೆ.

ಏಳು ರಾಜ್ಯಗಳಲ್ಲಿ ನಾಲ್ಕರಲ್ಲಿ ಇಂಡಿಯಾ ಮೈತ್ರಿಕೂಟ ಆಡಳಿತ ನಡೆಸುತ್ತಿದ್ದು, ಇನ್ನುಳಿದ ರಾಜ್ಯಗಳಲ್ಲಿ ಎನ್‌ ಡಿಎ (ಬಿಜೆಪಿ) ಅಧಿಕಾರದಲ್ಲಿದೆ. ಹಿಮಾಚಲ್‌ ಪ್ರದೇಶದ ಮುಖ್ಯಮಂತ್ರಿ  ಸುಖ್‌ ವಿಂದರ್‌ ಸಿಂಗ್‌ ಸುಖು ಪತ್ನಿ ಕಮಲೇಶ್‌ ಠಾಕೂರ್‌ ಸೇರಿದಂತೆ ಹಲವು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

Advertisement

ಹಿಮಾಚಲ್‌ ಪ್ರದೇಶದಲ್ಲಿ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಆರು ಕಾಂಗ್ರೆಸ್‌ ಶಾಸಕರು ಹಾಗೂ ಮೂವರು ಪಕ್ಷೇತರರು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಅಡ್ಡಮತದಾನ ಮೂಲಕ ಮತ ಚಲಾಯಿಸಿದ್ದರು.

ಕಾಂಗ್ರೆಸ್‌ ಹೈಕಮಾಂಡ್‌ ಆರು ಮಂದಿ ಕಾಂಗ್ರೆಸ್‌ ಶಾಸಕರನ್ನು ಅನರ್ಹಗೊಳಿಸಿದ್ದು, ಈ ಕ್ಷೇತ್ರಗಳಲ್ಲಿ ಈಗಾಗಲೇ ಉಪ ಚುನಾವಣೆ ನಡೆದಿತ್ತು. ಮೂವರು ಪಕ್ಷೇತರರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು, ಅವರಿಂದ ತೆರವಾದ ಮೂರು ಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next