Advertisement

ಮಿಚಿಗನ್ ಗವರ್ನರ್ ಅಪಹರಣಕ್ಕೆ ಸಂಚು: 13 ಮಂದಿಯ ಬಂಧನ

11:36 AM Oct 09, 2020 | Nagendra Trasi |

ವಾಷಿಂಗ್ಟನ್:ಮಿಚಿಗನ್ ರಾಜ್ಯದ ರಾಜ್ಯಪಾಲೆಯನ್ನು ಅಪಹರಿಸಿ, ರಾಜಧಾನಿ ಕಟ್ಟಡದ ಮೇಲೆ ದಾಳಿ ನಡೆಸುವ ಸಂಚು ನಡೆಸಿದ ಆರೋಪದಲ್ಲಿ ವೋಲ್ವೆರಿನೆ ವಾಚ್ ಮೆನ್ ಗ್ರೂಪ್ (ಪ್ರಜಾಸೈನ್ಯ)ನ ಏಳು ಮಂದಿ ಸೇರಿದಂತೆ 13 ಜನರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿರುವುದಾಗಿ ವರದಿ ಹೇಳಿದೆ.

Advertisement

ಈ ಸಂಘಟನೆ ರಾಜ್ಯಪಾಲೆ, ಡೆಮೋಕ್ರಟ್ ಗ್ರೆಟ್ ಚೆನ್ ವಿಟ್ಮರ್ ಅವರನ್ನು ಅಪಹರಿಸಲು ಸಂಚು ಹೂಡಿತ್ತು. ವಿಟ್ಮರ್ ಮುಂಬರುವ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯ ವಿರುದ್ಧ ಕಿಡಿಕಾರಿದ್ದರು ಎಂದು ಎಫ್ ಬಿಐ ಬಿಡುಗಡೆ ಮಾಡಿರುವ ಅಫಿಡವಿತ್ ನಲ್ಲಿ ತಿಳಿಸಿದೆ.

ಕಾನೂನು ಪಾಲಕರು, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕ ಸೇವೆಯ ಜನಪ್ರತಿನಿಧಿಗಳ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸಂಚನ್ನು ನಾವು ಬಹಿರಂಗಗೊಳಿಸಿದ್ದೇವೆ ಎಂದು ಮಿಚಿಗನ್ ಅಟಾರ್ನಿ ಜನರಲ್ ಡಾನಾ ನೆಸ್ಸೆಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದರು.

ದೇಶೀಯ ಬಂಡುಕೋರರಿಂದ ಚುನಾವಣಾ ಸಂಬಂಧಿ ದಾಳಿ ನಡೆಯುವ ಸಾಧ್ಯತೆ ಇದ್ದಿರುವುದಾಗಿ ಅಮೆರಿಕದ ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಕೋವಿಡ್ ಸೋಂಕು, ರಾಜಕೀಯ ಉದ್ವಿಗ್ನತೆ, ನಾಗರಿಕ ಅಶಾಂತಿಯ ಲಾಭ ಪಡೆಯಲು ಬಂಡುಕೋರರು ಯತ್ನಿಸುವ ಸಾಧ್ಯತೆ ಇದ್ದಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next