Advertisement

ಜೂ.24 ರಿಂದ ಗೋವಾದಲ್ಲಿ12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

02:54 PM Jun 19, 2024 | Team Udayavani |

ಹುಬ್ಬಳ್ಳಿ: 12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಜೂ.24-30 ರವರೆಗೆ ಗೋವಾದ ಪೋಂಡಾದ ರಾಮನಾಥ ದೇವಸ್ಥಾನದಲ್ಲಿ ನಡೆಯಲಿದೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನಗೌಡ,  ಹಿಂದೂ ರಾಷ್ಟ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಂವಾದ, ಚರ್ಚೆ ನಡೆಯಲಿದೆ. ಅಧಿವೇಶನದಲ್ಲಿ ಅಮೆರಿಕ, ಇಂಗ್ಲೆಂಡ್, ಬಾಂಗ್ಲಾ ದೇಶದ ಪ್ರತಿನಿಧಿಗಳಲ್ಲದೆ, ದೇಶದ 26 ರಾಜ್ಯಗಳಿಂದ 2000ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದರು.

ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.43.15 ರಷ್ಟು ಹೆಚ್ಚಾದರೆ, ಹಿಂದೂಗಳ ಜನಸಂಖ್ಯೆ ಶೇ.8 ರಷ್ಟು ಕುಸಿತ ಕಂಡಿದೆ ಈ ಬಗ್ಗೆ ಜನಗಣತಿ ನಡೆಸಿ ಜನತೆ ಮುಂದೆ ವರದಿ ಇರಿಸಬೇಕಾಗಿದೆ. ದೇಶದಲ್ಲಿ ಸಿಎಎ ಹಾಗೂ ಎನ್ ಆರ್ ಸಿ ಕಾಯ್ದೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವುದು ಅತ್ಯವಶ್ಯ ಎಂದು ಅವರು ಆಗ್ರಹಿಸಿದರು.

ಮಾತೆ ವೈಷ್ಣೋದೇವಿ ದರ್ಶನಕ್ಕೆ ಹೋಗುವ ಭಕ್ತರ ಬಸ್ಸಿನ ಮೇಲೆ ಉಗ್ರರು ದಾಳಿ ಮಾಡುತ್ತಿದ್ದಾರೆ ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಗಂಭೀರ ಕ್ರಮಗಳು ಅತ್ಯವಶ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next